alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಜಪ ಮಾಡ್ತಿದ್ದಾರೆ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ಸ್

ಕ್ರಿಕೆಟ್ ಜಗತ್ತಿನ ತುಂಬೆಲ್ಲಾ ಈಗ ವಿರಾಟ್ ಕೊಹ್ಲಿ ಆರ್ಭಟ. ಟೀಂ ಇಂಡಿಯಾ ನಾಯಕನಿಗೆ ಪ್ರಶಂಸೆಗಳ ಸುರಿಮಳೆಯಾಗ್ತಿದೆ. 35ನೇ ಏಕದಿನ ಶತಕದೊಂದಿಗೆ ತಂಡವನ್ನು 5-1 ಅಂತರದಿಂದ ಸರಣಿ ಗೆಲ್ಲಿಸಿದ ಕೊಹ್ಲಿ ಬಗ್ಗೆ ಎಷ್ಟು ಹೇಳಿದ್ರೂ ಸಾಲದು ಎನ್ನುತ್ತಿದ್ದಾರೆ ಅಭಿಮಾನಿಗಳು.

ಭಾರತೀಯರು ಹಾಗಿರ್ಲಿ, ಪಾಕಿಸ್ತಾನದ ಕ್ರಿಕೆಟ್ ಆಟಗಾರ್ತಿಯರು ಸಹ ಕೊಹ್ಲಿಗೆ ಫಿದಾ ಆಗ್ಬಿಟ್ಟಿದ್ದಾರೆ. ಪಾಕ್ ಮಹಿಳಾ ತಂಡದ ಆಟಗಾರ್ತಿಯರಾದ ಸೈದಾ ನೈನ್ ಹಾಗೂ ಕೈನರ್ ಇಮ್ತಿಯಾಜ್, ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ವಿರಾಟ್ ನಿಜಕ್ಕೂ ಜೀನಿಯಸ್ ಅಂತಾ ಟ್ವೀಟ್ ಮಾಡಿದ್ದಾರೆ.

ಪಾಕ್ ಆಟಗಾರ್ತಿಯರು ಮಾಡಿರೋ ಟ್ವೀಟ್ ವೈರಲ್ ಆಗಿದೆ. ಇನ್ನು ಆರ್. ಅಶ್ವಿನ್, ಸುರೇಶ್ ರೈನಾ, ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್ ಸೇರಿದಂತೆ ಹಲವು ಕ್ರಿಕೆಟಿಗರು ಕೊಹ್ಲಿಗೆ ಅಭಿನಂದನೆ ಹೇಳಿದ್ದಾರೆ. ಟೀಂ ಇಂಡಿಯಾ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...