alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಹಿರಂಗ’ವಾಯ್ತು ಆಟಗಾರರ ವೇತನ ತಾರತಮ್ಯ

ಭಾರತದಲ್ಲಿ ಕ್ರಿಕೆಟ್ ಗೆ ನೀಡುವ ಪ್ರಾಧಾನ್ಯತೆ ಉಳಿದ ಕ್ರೀಡೆಗಳಿಗೆ ನೀಡುವುದಿಲ್ಲ ಎಂಬ ಕೂಗು ಸಾಕಷ್ಟು ಸಮಯದಿಂದ ಕೇಳಿ ಬರುತ್ತಲೇ ಇದೆ. ಉಳಿದ ಆಟಗಳ ಆಟಗಾರರಿಗಿಂತ ಕನಿಷ್ಠ ಆರೇಳು ಪಟ್ಟು ಹೆಚ್ಚೇ ಕ್ರಿಕೆಟ್ ಆಟಗಾರರು ಗಳಿಸುತ್ತಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಬಿಸಿಸಿಐ ಕ್ರಿಕೆಟ್ ಆಟಗಾರರ ಸಂಭಾವನೆಯನ್ನು ಹೆಚ್ಚಿಸಿತ್ತು. ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ವಾರ್ಷಿಕ ಸಂಭಾವನೆ 7 ಕೋಟಿ ರೂ. ತಲುಪಿದೆ. ಆದರೆ ಭಾರತದ ಉಳಿದ ಪ್ರಮುಖ ಆಟಗಳಾಗಿರುವ ಫುಟ್‌ಬಾಲ್‌ ಹಾಗೂ ಹಾಕಿ ಆಟಗಾರರ ವಾರ್ಷಿಕ ವೇತನ ಕೊಹ್ಲಿಗೆ ಹೋಲಿಸಿದರೆ ತೀರಾ ಕಡಿಮೆ.

ಭಾರತದ ಫುಟ್‌ಬಾಲ್‌ ತಂಡದಲ್ಲಿ ಹೆಸರು ಗಳಿಸಿರುವ ಸುನಿಲ್‌ ಚೆತ್ರಿ ಅವರ ವಾರ್ಷಿಕ ಸಂಭಾವನೆ 70 ಲಕ್ಷ ರೂ., ಅಂತೆಯೇ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ತಂಡದ ಸದಸ್ಯರ ವಾರ್ಷಿಕ ಗಳಿಕ ಕೇವಲ 15 ಲಕ್ಷ ರೂ. ಮಾತ್ರ…!

ಇತರೆ ಕ್ರೀಡೆಗೆ ಅತ್ಯಂತ ಕಡಿಮೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಆರೋಪ ಇದೀಗ ಮತ್ತೆ ಸುದ್ದಿಯಾಗಿದೆ. ಫುಟ್‌ಬಾಲ್‌ ಆಟಗಾರನಿಗಿಂತ 10 ಪಟ್ಟು ಹೆಚ್ಚು ಕ್ರಿಕೆಟ್ ಆಟಗಾರನ ಸಂಭಾವನೆಗೆ ವಿನಿಯೋಗಿಸಲಾಗುತ್ತಿದೆ. ಹಾಕಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...