alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಕೈ ಮೇಲಿರುವ ಟ್ಯಾಟೂಗಳ ಹಿಂದಿದೆ ಕುತೂಹಲಕರ ಸಂಗತಿ

ಟೀಂ ಇಂಡಿಯಾದ ಕ್ಯಾಪ್ಟನ್, ಭಾರತದ ಹೊಸ ಯೂಥ್ ಐಕಾನ್ ವಿರಾಟ್ ಕೊಹ್ಲಿ ಟ್ಯಾಟೂ ಪ್ರಿಯ ಎಂಬುದು ಎಲ್ಲರಿಗೂ ತಿಳಿದೇ ಇರುವ ವಿಚಾರ. ಆದರೆ ಕೈತುಂಬಾ ಟ್ಯಾಟೂ ಸಾಮ್ರಾಜ್ಯವನ್ನೇ ಸೃಷ್ಟಿಸಿರುವ ಆತನ ಕೈಗಳನ್ನು ಅಲಂಕರಿಸಿರುವ ಟ್ಯಾಟೂಗಳೆಷ್ಟು? ಮತ್ತು ಅವು ಯಾವುವು ಎಂಬುದು ಮಾತ್ರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಕೊಹ್ಲಿ ಬೇರೇ ಬೇರೆ ಸಂದರ್ಭಗಳಲ್ಲಿ ಈವರೆಗೆ ಒಂಬತ್ತು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ. 18 ರ ಹರೆಯದಲ್ಲಿ ಪ್ರಾರಂಭವಾದ ಈ ಹವ್ಯಾಸ ಇಂದಿಗೂ ಮುಂದುವರಿದಿದೆ. ಹೆಚ್ಚಿನವರು ಕೊಹ್ಲಿ, ಇವನ್ನೆಲ್ಲಾ ಸುಖಾಸುಮ್ಮನೇ ಕ್ರೇಜ್ ಗೆ ಹಾಕಿಸಿಕೊಂಡಿದ್ದಾರೆ ಎಂದು ತಿಳಿದಿರಬಹುದು. ಆದರೆ ಈ ಹವ್ಯಾಸದ ಹಿಂದೆ ಬಹಳ ದೊಡ್ಡ ಕತೆಗಳೇ ಇವೆ.

ಇವೆಲ್ಲವೂ ವಿರಾಟ್ ಕೊಹ್ಲಿಯ ನಂಬಿಕೆಗಳು. ಅವರಿಗೆ ಪ್ರೇರಣೆ ನೀಡಿದ ಸಂಗತಿಗಳು. ನ್ಯಾಶನಲ್ ಜಿಯಾಗ್ರಫಿಕ್ ಚಾನಲ್ ನ ಹೊಸ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿಯ ಟ್ಯೂಟೂ ಕತೆಗಳು ಅನಾವರಣಗೊಂಡಿವೆ.

ವಿರಾಟ್ ಕೊಹ್ಲಿಯ ಒಂಬತ್ತು ಹಚ್ಚೆಗಳ ಪಟ್ಟಿ ಇಲ್ಲಿದೆ ನೋಡಿ. ತನ್ನ ಹೆತ್ತವರಾದ ಸರೋಜ್ ಮತ್ತು ಪ್ರೇಮ್ ಹೆಸರು, ಭಗವಾನ್ ಶಿವನ ಚಿತ್ರ, ಮಂದಿರದ ಚಿತ್ರ, ಟೆಸ್ಟ್ ಮತ್ತು ಒನ್ ಡೇ ಪದಾರ್ಪಣೆ ಕ್ಯಾಪ್ ನಂಬರ್, ಬುಡಕಟ್ಟು ಕಲೆ, ವೃಷ್ಚಿಕ ರಾಶಿ(ಸ್ಕಾರ್ಪಿಯೋ) ಚಿತ್ರ, ಜಪಾನಿನ ಸಮುರೈ ಲಾಂಛನ, ದೇವರ ಕಣ್ಣು ಹಾಗೂ ಓಂಕಾರ ಕೊಹ್ಲಿ ಕೈ ಮೇಲೆ ಟ್ಯಾಟೋಗಳಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...