alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಳ 7 ಕೋಟಿಯಾದ್ರೂ ಈ ಕಾರಣಕ್ಕೆ ಖುಷಿಯಾಗಿಲ್ಲ ಕೊಹ್ಲಿ…!

ಬುಧವಾರ ಬಿಸಿಸಿಐ ಟೀಂ ಇಂಡಿಯಾ ಆಟಗಾರರ ವಾರ್ಷಿಕ ಒಪ್ಪಂದದ ಘೋಷಣೆ ಮಾಡಿದೆ. ಹೊಸ ಒಪ್ಪಂದದ ಪ್ರಕಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿ 5 ಆಟಗಾರರ ಸಂಬಳ 7 ಕೋಟಿ ರೂಪಾಯಿಯಾಗಿದೆ. ಹಿಂದಿನ ಒಪ್ಪಂದದಲ್ಲಿ ವಿರಾಟ್ ಕೊಹ್ಲಿಗೆ 2 ಕೋಟಿ ಸಿಗ್ತಿತ್ತು. ಆದ್ರೀಗ 5 ಕೋಟಿ ರೂಪಾಯಿ ಹೆಚ್ಚಿಗೆ ಸಿಗ್ತಿದೆ. ಆದ್ರೆ ಸಂಬಳ ಇಷ್ಟು ಏರಿಕೆಯಾದ್ರೂ ವಿರಾಟ್ ಕೊಹ್ಲಿ ಖುಷಿಯಾಗಿಲ್ಲ.

ಆಶ್ಚರ್ಯಗೊಳ್ಳಬೇಡಿ. ಕೊಹ್ಲಿ ತಮ್ಮ ಸಂಬಳದ ಬಗ್ಗೆ ಬೇಸರಗೊಂಡಿಲ್ಲ. ಬದಲಾಗಿ ಮಹಿಳಾ ಕ್ರಿಕೆಟ್ ಆಟಗಾರರಿಗೆ ಸಿಗ್ತಿರುವ ಸಂಬಳದ ಬಗ್ಗೆ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಹೊಸ ವಾರ್ಷಿಕ ಒಪ್ಪಂದದಲ್ಲಿ ಮಹಿಳಾ ಆಟಗಾರರನ್ನು ಎ, ಬಿ ಮತ್ತು ಸಿ ಗ್ರೇಡ್ ನಲ್ಲಿ ಹಂಚಿದೆ. ಎ ಗ್ರೇಡ್ ಮಹಿಳಾ ಆಟಗಾರ್ತಿಯರಿಗೆ 50 ಲಕ್ಷ ರೂಪಾಯಿ ಸಿಗಲಿದೆ. ಬಿ ಮತ್ತು ಸಿ ಗ್ರೇಡ್ ಆಟಗಾರರಿಗೆ 30 ಮತ್ತು 10 ಲಕ್ಷ ರೂಪಾಯಿ ಸಿಗಲಿದೆ.

ಮಹಿಳಾ ಕ್ರಿಕೆಟರ್ ಹಾಗೂ ಪುರುಷ ಕ್ರಿಕೆಟ್ ಆಟಗಾರರ ಮಧ್ಯೆ ಭೂಮಿ-ಆಕಾಶದಷ್ಟು ಅಂತರವಿದೆ. ಇದರಿಂದ ಅಸಮಾಧಾನಗೊಂಡಿರುವ ಕೊಹ್ಲಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪುರುಷ ಆಟಗಾರರಷ್ಟೇ ಮಹಿಳಾ ಆಟಗಾರರ ಸಂಬಳ ಏರಿಕೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಸದಾ ಮಹಿಳೆಯರ ಸಮಾನತೆ ಬಗ್ಗೆ ಮಾತನಾಡುವ ಕೊಹ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲ ಮಹಿಳೆಯರಿಗೂ ಶುಭ ಕೋರಿದ್ದಾರೆ. ಪತ್ನಿ ಅನುಷ್ಕಾಳಿಗೆ ಸುಂದರ ಟ್ವಿಟ್ ಮಾಡಿರುವ ಕೊಹ್ಲಿ ಮಹಿಳೆಯರು ಪುರುಷರಿಗೆ ಸಮವಲ್ಲ. ಅವರಿಗಿಂತ ಹೆಚ್ಚು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...