alex Certify
ಕನ್ನಡ ದುನಿಯಾ       Mobile App
       

Kannada Duniya

1000 ರನ್ ಗಳ ಸರದಾರನಾಗಲಿಲ್ಲ ವಿರಾಟ್ ಕೊಹ್ಲಿ

virat-kohli-rcb-567ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 8 ರನ್ ಗಳ ಅಂತರದಿಂದ ಜಯ ಸಾಧಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರಾಭವಗೊಂಡರೂ ತಂಡದ ನಾಯಕ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಗಳಿಸುವ ಮೂಲಕ ‘ಆರೇಂಜ್ ಕ್ಯಾಪ್’ ಧರಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿಯವರು ಮತ್ತೊಂದು ದಾಖಲೆ ಮಾಡುವ ಅವಕಾಶವನ್ನು ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡಿದ್ದಾರೆ.

ಸರಣಿಯಲ್ಲಿ ಒಟ್ಟು 973 ರನ್ ಗಳಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿ 1000 ರನ್ ಪೂರೈಸಿದ್ದರೆ ಮತ್ತೊಂದು ಕೀರ್ತಿ ಅವರ ಮುಡಿಗೇರುತ್ತಿತ್ತು. ಫೈನಲ್ ಪಂದ್ಯದಲ್ಲಿ 54 ರನ್ ಗಳಿಸಿದ ವಿರಾಟ್ ಕೊಹ್ಲಿ ತಮ್ಮ 7 ನೇ ಅರ್ಧ ಶತಕವನ್ನು ದಾಖಲಿಸಿದರು. ಸರಣಿ ಆರಂಭದಿಂದಲೂ ಉತ್ತಮ ಆಟವಾಡಿರುವ ಅವರು ಒಟ್ಟು 4 ಶತಕ ಹಾಗೂ 7 ಅರ್ಧ ಶತಕ ದಾಖಲಿಸಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...