alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಂತರ ವೇಳಾಪಟ್ಟಿ : ಕಿಡಿ ಕಾರಿದ ಕೊಹ್ಲಿ

ನಾಗಪುರ: ವಿಶ್ರಾಂತಿಗೆ ಆಸ್ಪದವಿಲ್ಲದಂತೆ ನಿರಂತರವಾಗಿ ವೇಳಾಪಟ್ಟಿ ನಿಗದಿಪಡಿಸುವುದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪ್ರವಾಸಿ ಶ್ರೀಲಂಕಾ ವಿರುದ್ಧ 3 ಟೆಸ್ಟ್, 3 ಏಕದಿನ ಹಾಗೂ 3 ಟಿ -20 ಪಂದ್ಯಗಳನ್ನು ಆಡಬೇಕಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಸಜ್ಜಾಗಬೇಕಿದೆ. ಮಹತ್ವದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗಲು ಸಮಯವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಪ್ರತಿ ಸರಣಿಗಳ ನಡುವೆ 1 ತಿಂಗಳಾದರೂ ಸಮಯ ಬೇಕಿದೆ. ಡಿಸೆಂಬರ್ 24 ರಂದು ಶ್ರೀಲಂಕಾ ಎದುರಿನ ಅಂತಿಮ ಪಂದ್ಯ ಮುಗಿಯಲಿದ್ದು, ಡಿಸೆಂಬರ್ 27 ರಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡಬೇಕಿದೆ. ಅಲ್ಲಿ ಡಿಸೆಂಬರ್ 30 ರಂದು ಅಭ್ಯಾಸ ಪಂದ್ಯ ನಡೆಯಲಿದೆ.

ಬೇರೆ ದೇಶಗಳ ಮೈದಾನದಲ್ಲಿ ಆಡಲು ಸಾಕಷ್ಟು ಪೂರ್ವ ಸಿದ್ಧತೆ ಅವಶ್ಯಕ. ಅದರಲ್ಲಿಯೂ ದಕ್ಷಿಣ ಆಫ್ರಿಕಾದಂತಹ ತಂಡದ ಎದುರಿನ ಪಂದ್ಯಕ್ಕೆ ತಾಲೀಮು ನಡೆಸಬೇಕು. ಜೊತೆಗೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ. ಇದಕ್ಕೆಲ್ಲಾ ಕಾಲಾವಕಾಶ ಸಿಗದಿದ್ದರೆ, ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ನಿರಂತರ ಆಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೊಹ್ಲಿ, ನಾನೂ ಮನುಷ್ಯನೇ, ರೋಬೋ ಅಲ್ಲ ಎಂದು ಹೇಳಿದ್ದರು.

ಕೊಹ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿ.ಸಿ.ಸಿ.ಐ. ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಕೊಹ್ಲಿಯವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಸರಣಿಗಳ ನಡುವೆ ಹೆಚ್ಚು ದಿನಗಳ ಅಂತರ ಇರುವಂತೆ ನೋಡಿಕೊಳ್ಳಲಾಗುವುದು. ಆಟಗಾರರ ಮೇಲಿನ ಒತ್ತಡ ಕಡಿಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...