alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಕೊಹ್ಲಿ ಬೆಂಬಲ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ನಲ್ಲಿ ಸ್ಥಾನ ಪಕ್ಕಾ ಮಾಡಿಕೊಂಡಿರುವ ಭಾರತ ಮಹಿಳಾ ತಂಡಕ್ಕೆ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜೆರ್ಸಿ ನೋಸ್ ನೋ ಜೆಂಡರ್( ಜೆರ್ಸಿಗೆ ಲಿಂಗಭೇದವಿಲ್ಲ) ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಈಗ ಕೊಹ್ಲಿಯೂ ಕೈ ಜೋಡಿಸಿದ್ದಾರೆ.

ಈ ಬಗ್ಗೆ ಟ್ವೀಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಮಹಿಳಾ ತಂಡವನ್ನು ಹುರಿದುಂಬಿಸಿರುವ ಕೊಹ್ಲಿ ಇದೀಗ ಈ ಅಭಿಯಾನವನ್ನು ಮುಂದುವರಿಸುವ ಕಾಯಕವನ್ನು ಯುವ ವಿಕೆಟ್ ಕೀಪರ್ ರಿಷಬ್ ಪಂತ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಫುಟ್ಬಾಲಿಗ ಸುನಿಲ್ ಛೇಟ್ರಿ ಹೆಗಲಿಗೆ ಹಾಕಿದ್ದಾರೆ.

ಭಾರತ ತಂಡದ ಜೆರ್ಸಿ ಧರಿಸಿಯೇ ವಿಡಿಯೋ ಮೆಸೇಜ್ ಮಾಡಿರುವ ಕೊಹ್ಲಿ ಇದರ ಜೊತೆಗೆ “ಭಾರತ ತಂಡದ ಜೆರ್ಸಿ ತೊಡುವುದೇ ಹೆಮ್ಮೆಯ ವಿಷಯ. ನಾವು ಈಗ ಸೆಮಿಫೈನಲ್ ಗೆ ದಾರಿಯಲ್ಲಿದ್ದೇವೆ. ಇದೀಗ ವಿಶ್ವಕಪ್ ಅನ್ನು ತವರಿಗೆ ತರಲು ಸಮಯ ಬಂದಿದೆ’’ ಎಂಬುದಾಗಿ ಟ್ವೀಟಿಸಿದ್ದಾರೆ. ಜೊತೆಗೆ ಜೆರ್ಸಿ ನೋಸ್ ನೋ ಜೆಂಡರ್(ಜೆರ್ಸಿಗೆ ಲಿಂಗಭೇದವಿಲ್ಲ) ಹ್ಯಾಶ್ ಟ್ಯಾಗ್ ಕೂಡ ಹಾಕಿದ್ದಾರೆ.

ಈಗಾಗಲೇ ತನ್ನ ಗುಂಪಿನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಮಹಿಳೆಯರ ತಂಡ ಅತ್ಯುತ್ತಮ ಫಾರ್ಮ್ ನಲ್ಲಿದೆ. ಕೊನೆಯ ಔಪಚಾರಿಕ ಲೀಗ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಬಳಗ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...