alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಪ್ರವಾಸಕ್ಕಿಂತ ಮೊದಲು ಕೊಹ್ಲಿ ಮಾಡಿದ್ದಾರೆ ವಿಶೇಷ ಪ್ಲಾನ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ವಿಶ್ವವೇ ಕೊಂಡಾಡುತ್ತದೆ. ಆದ್ರೆ ಇಂಗ್ಲೆಂಡ್ ವಿಚಾರ ಬಂದಾಗ ಕೊಹ್ಲಿ ಅಂಕಿ-ಅಂಶ ಭಿನ್ನವಾಗಿದೆ. ಇಂಗ್ಲೆಂಡ್ ನಲ್ಲಿ 5 ಟೆಸ್ಟ್ ಪಂದ್ಯವನ್ನಾಡಿರುವ ಕೊಹ್ಲಿ 13.40 ಸರಾಸರಿಯಲ್ಲಿ 134 ರನ್ ಗಳಿಸಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೊಹ್ಲಿ ಇಂಗ್ಲೆಂಡ್ ನಲ್ಲಿ ಉತ್ತಮ ಪ್ರದರ್ಶನ ತೋರಲು ವಿಶೇಷ ಪ್ಲಾನ್ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ತೋರಲು ಮುಂದಾಗಿರುವ ಕೊಹ್ಲಿ ಅಪಘಾನಿಸ್ತಾನದ ವಿರುದ್ಧ ಆಡದಿರಲು ಮುಂದಾಗಿದ್ದಾರೆ. ಅಪಘಾನಿಸ್ತಾನದ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ತಂಡದಿಂದ ಕೊಹ್ಲಿ ಹೊರಗಿರಲಿದ್ದಾರೆ. ಈ ಬಾರಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ 5 ಟೆಸ್ಟ್ ಸರಣಿ, ಮೂರು ಏಕದಿನ ಪಂದ್ಯ ಹಾಗೂ ಟಿ-20 ಪಂದ್ಯಗಳನ್ನು ಆಡಲಿದೆ.

ಜುಲೈ 3ರಿಂದ ಪಂದ್ಯಗಳು ಪ್ರಾರಂಭವಾಗಲಿವೆ. ಜೂನ್ ನಲ್ಲಿ ಸರ್ರೆ ಪರ ಕೊಹ್ಲಿ ಕೌಂಟಿ ಆಡಲಿದ್ದಾರೆ. ಇಂಗ್ಲೆಂಡ್ ಪಿಚ್ ಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಕೊಹ್ಲಿ ಕೌಂಟ್ರಿ ಆಡಲಿದ್ದಾರೆ. ಈ ಹಿಂದೆ 1992ರಲ್ಲಿ ತೆಂಡೂಲ್ಕರ್ ಕೂಡ ಯಾರ್ಕ್ಷೈರ್ ನಲ್ಲಿ ಕೌಂಟ್ರಿ ಆಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...