alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಜೊತೆ ಸೆಲ್ಫಿ ಬೇಕಾದ್ರೆ ಇಲ್ಲಿಗೆ ಬನ್ನಿ

ನೆಚ್ಚಿನ ಆಟಗಾರರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಹುಚ್ಚು ಎಲ್ಲರಿಗೂ ಇರುತ್ತದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇರಲಿ ಇಲ್ಲ ವಿರಾಟ್ ಕೊಹ್ಲಿ ಇರಲಿ, ಅಭಿಮಾನಿಗಳು ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬೀಳ್ತಾರೆ. ಆದ್ರೆ ಎಲ್ಲರಿಗೂ ನೆಚ್ಚಿನ ಆಟಗಾರರ ಜೊತೆ ಸೆಲ್ಫಿ ಸಾಧ್ಯವಿಲ್ಲ. ಹಾಗಾಂತ ನಿರಾಶೆಯಾಗಬೇಕಿಲ್ಲ. ಆಟಗಾರರ ಮೇಣದ ಪ್ರತಿಭೆಗಳು ನಿಮ್ಮ ಸೆಲ್ಫಿಗೆ ಸಾಥ್ ನೀಡಲಿವೆ.

ವಿಶ್ವದ ಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ಮ್ಯೂಜಿಯಂನ ದೆಹಲಿ ಶಾಖೆಯಲ್ಲಿ ಈಗ ಟೀಂ ಇಂಡಿಯಾ ನಾಯಕ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಮೇಣದ ಪ್ರತಿಮೆ ಮ್ಯೂಸಿಯಂನಲ್ಲಿ ಸ್ಥಾಪನೆಗೊಂಡಿದೆ. ಬುಧವಾರ ಸಾರ್ವಜನಿಕರಿಗೆ ಕೊಹ್ಲಿ ಪ್ರತಿಮೆ ನೋಡುವ ಅವಕಾಶ ಸಿಕ್ಕಿದೆ.

ಕೆಲ ದಿನಗಳ ಹಿಂದಷ್ಟೇ ಕೊಹ್ಲಿ ಮೇಣದ ಪ್ರತಿಮೆ ಸಿದ್ಧವಾಗ್ತಿದೆ ಎಂದು ಲಂಡನ್ ಕಲಾವಿದರು ಹೇಳಿದ್ದರು. ಈಗ ಪ್ರತಿಮೆ ಸಿದ್ಧವಾಗಿದೆ. ಪ್ರತಿಮೆ ತಯಾರಾಗುವ ವೇಳೆಯೇ ಧನ್ಯವಾದ ಹೇಳಿದ್ದ ಕೊಹ್ಲಿ ಮೇಣದ ಪ್ರತಿಮೆ ನೋಡಿ ಖುಷಿಯಾಗಿದ್ದಾರಂತೆ. ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಕೊಹ್ಲಿ ಖುಷಿ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...