alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಪಿ.ಎಲ್. ಬಳಿಕ ಬಯಲಾಯ್ತು ಕೊಹ್ಲಿಯ ಮತ್ತೊಂದು ಮುಖ

Virat-Kohli-j1

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಟೂರ್ನಿಯಲ್ಲಿ ಅವರು ನೀಡಿದ ಪ್ರದರ್ಶನಕ್ಕೆ ಸಿಯೆಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.

ಭಾರತದ ಉದಯೋನ್ಮುಖ ಆಟಗಾರರಾಗಿರುವ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದು, ಅಮೋಘ ಪ್ರದರ್ಶನ ನೀಡಿ 4 ಸೆಂಚುರಿ ಒಳಗೊಂಡಂತೆ 16 ಪಂದ್ಯಗಳಿಂದ 973 ರನ್ ಗಳಿಸಿದ್ದಾರೆ. ಐ.ಪಿ.ಎಲ್. ಟೂರ್ನಿಯ ಸಂದರ್ಭದಲ್ಲಿ ಪುಣೆಯಲ್ಲಿ ಪಂದ್ಯ ನಡೆಯುವಾಗ, ಸುನಂದನ್ ಲೆಲೆ ನಿರ್ವಹಿಸುತ್ತಿರುವ ‘ಅಬಾಲ್ ಮಯ’ ವೃದ್ಧಾಶ್ರಮಕ್ಕೆ ಕೊಹ್ಲಿ ಭೇಟಿ ನೀಡಿದ್ದರು.

ಅಲ್ಲಿನ ಹಿರಿಯರೊಂದಿಗೆ ಕೆಲ ಸಮಯ ಕಳೆದ ಕೊಹ್ಲಿ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದರು. ಈಗ ಟೂರ್ನಿ ಮುಗಿದ ನಂತರವೂ ಕೊಹ್ಲಿ ವಿಶ್ರಾಂತಿ ಪಡೆಯದೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಜೂನ್ 3ರಂದು ಮುಂಬೈನ ಹೋಟೆಲ್ ಒಂದರಲ್ಲಿ ಸಾಮಾಜಿಕ ಸೇವಾ ಸಂಸ್ಥೆಯೊಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗವಹಿಸಲಿದ್ದಾರೆ. ಅನಾಥ ಮಕ್ಕಳು, ಯುವಕರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆಯ ಪರವಾಗಿ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ, ಸೇವಾ ಸಂಸ್ಥೆಯ ಪರವಾಗಿ ನಡೆಸಿಕೊಡಲಿರುವ ಈ ಕಾರ್ಯಕ್ರಮದಲ್ಲಿ ವಿಂಡೀಸ್ ಆಟಗಾರ ಕ್ರಿಸ್ ಗೇಲ್ ಸೇರಿದಂತೆ ಹಲವು ಆಟಗಾರರು ಕೊಹ್ಲಿ ಆಹ್ವಾನದ ಮೇರೆಗೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...