alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುವಿನ ವೇಳೆಯಲ್ಲಿ ಏನ್ಮಾಡ್ತಿದ್ದಾರೆ ವಿರಾಟ್ ಕೊಹ್ಲಿ..?

virat kohli 456802ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಜಿಂಬಾಬ್ವೆ ಪ್ರವಾಸಕ್ಕೆ ತೆರಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂಬೈನಲ್ಲಿದ್ದ ವೇಳೆ ಗೆಳತಿ ಅನುಷ್ಕಾ ಶರ್ಮಾ ಜೊತೆ ಕಾಲ ಕಳೆದಿದ್ದ ಕೊಹ್ಲಿ, ಈಗ ದೆಹಲಿಗೆ ತೆರಳಿದ್ದಾರೆ. ಬಿಡುವಿನ ವೇಳೆ ತಾವು ಕಾಲ ಕಳೆಯುತ್ತಿರುವ ಕೆಲ ಚಿತ್ರಗಳನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ಲೇ ಸ್ಟೇಷನ್ ಗೇಮ್ ಆಡುತ್ತಿರುವ ತಮ್ಮ ಚಿತ್ರವನ್ನು ಹಾಕಿರುವ ವಿರಾಟ್ ಕೊಹ್ಲಿ, ‘When it is raining outside & you are playing playstation & your favorite game on it’ ಎಂದು ಟ್ವೀಟ್ ಮಾಡಿದ್ದಾರೆ.

ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆಗೆ ಸಮಯ ಕಳೆಯುತ್ತಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ಪ್ರಾಕ್ಟೀಸ್ ಅನ್ನು ಕೈ ಬಿಟ್ಟಿಲ್ಲ. ಪ್ರಾಕ್ಟೀಸ್ ಗೆ ಖುದ್ದು ತಾವೇ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ತೆರಳುತ್ತಿರುವ ಚಿತ್ರವನ್ನೂ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ, ಏಷ್ಯಾ ಕಪ್, ಐಸಿಸಿ ವಿಶ್ವ ಟಿ20 ಹಾಗೂ ಐಪಿಎಲ್ ಪಂದ್ಯಗಳ ಕಾರಣಕ್ಕಾಗಿ ಬಿಡುವಿಲ್ಲದಂತೆ ಆಟದಲ್ಲಿ ತೊಡಗಿಕೊಂಡಿದ್ದ ವಿರಾಟ್ ಕೊಹ್ಲಿ, ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದು ತಮ್ಮ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...