alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ತಾರೆಯರ ಜೀವನಾಧರಿತ ಚಿತ್ರಗಳ ಕುರಿತು ಕೊಹ್ಲಿ ಹೇಳಿದ್ದೇನು..?

virat9876ಸದ್ಯ ಮೂವರು ಖ್ಯಾತ ಕ್ರಿಕೆಟ್ ಆಟಗಾರರ ಜೀವನಾಧರಿತ ಚಿತ್ರಗಳು ಬಾಲಿವುಡ್ ನಲ್ಲಿ ತಯಾರಾಗ್ತಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ರ ‘ಸಚಿನ್: ಎ ಬಿಲಿಯನ್ ಡ್ರೀಮ್’, ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ‘ಎಂ.ಎಸ್. ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಹಾಗೂ ಭಾರತ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಕುರಿತ ‘ಅಜರ್’ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಕುರಿತು ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ತಾವು ಚಿಕ್ಕಂದಿನಿಂದಲೂ ಸಚಿನ್ ತೆಂಡೂಲ್ಕರ್ ಅವರ ನೆನಪುಗಳೊಂದಿಗೆ ಬಾಂಧವ್ಯ ಹೊಂದಿದ್ದು, ಅವರ ಕುರಿತಾದ ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಮಹೇಂದ್ರ ಸಿಂಗ್ ಧೋನಿಯವರ ಕ್ರಿಕೆಟ್ ಜರ್ನಿ ವಿಶೇಷವಾಗಿದೆ. ಅಲ್ಲದೇ ಮಹಮ್ಮದ್ ಅಜರುದ್ದೀನ್ ಅವರ ಜೀವನದಲ್ಲೂ ಸಾಕಷ್ಟು ಘಟನೆಗಳು ನಡೆದಿದೆ. ಕ್ರಿಕೆಟ್ ಆಟಗಾರರ ಕುರಿತು ಬಹಳಷ್ಟು ಬಾರಿ ನೈಜ ಚಿತ್ರಣ ಹೊರ ಬರುವುದಿಲ್ಲ. ಈ ಚಿತ್ರಗಳ ಮೂಲಕ ಅದೆಲ್ಲವೂ ಬಹಿರಂಗವಾಗಲಿದೆ ಎಂದು ಭಾವಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...