alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಗೆ ಮರೆಯಲಾಗದ ಗಿಫ್ಟ್ ನೀಡಿದ ಕೊಹ್ಲಿ

kohli gift to sachinಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಇಂದು ತಮ್ಮ 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪುಟ್ಟ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಸಚಿನ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರೆ, ಸಚಿನ್ ಅವರ ಕಟ್ಟಾ ಅಭಿಮಾನಿ ವಿರಾಟ್ ಕೊಹ್ಲಿ ಇದೇ ಸಂದರ್ಭದಲ್ಲಿ ಅಪರೂಪದ ಗಿಫ್ಟ್ ನೀಡಿದ್ದಾರೆ.

ಹೌದು. ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಹಾಗೂ ಟಿ20 ಪಂದ್ಯದಲ್ಲಿ ತಮ್ಮ ಪ್ರಥಮ ಶತಕ ದಾಖಲಿಸುವ ಮೂಲಕ ಇದನ್ನು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಅರ್ಪಿಸಿದ್ದಾರೆ. ಗುಜರಾತ್ ಲಯನ್ಸ್ ವಿರುದ್ದದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ 63 ಬಾಲ್ ಗಳಲ್ಲಿ ಕೊಹ್ಲಿ ಸೆಂಚುರಿ ಗಳಿಸಿದ್ದಾರೆ.

ಟಿ20 ಪಂದ್ಯಾವಳಿಯಲ್ಲಿ ಕೊಹ್ಲಿಯವರ ಪ್ರಥಮ ಸೆಂಚುರಿ ಇದಾಗಿದ್ದು, ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಲವರು ವಿರಾಟ್ ಕೊಹ್ಲಿಯವರನ್ನು ಅಭಿನಂದಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಪಕ್ಕಾ ಅಭಿಮಾನಿಯಾಗಿರುವ ವಿರಾಟ್ ಕೊಹ್ಲಿ ಈ ಹಿಂದಿನ ಪಂದ್ಯದಲ್ಲಿ ಸಚಿನ್ ಅವರಿಗೆ ಮೈದಾನದಲ್ಲೇ ಮೊಣಕಾಲೂರಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...