alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಕೊಹ್ಲಿಯ ವಿರಹ ವೇದನೆ

virat-kohli 8956

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಸಂಬಂಧ ಮುರಿದು ಬಿದ್ದಿದ್ದು ಹಳೆ ಸುದ್ದಿ. ಕೊಹ್ಲಿ ಹಾಗೂ ಅನುಷ್ಕಾ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಕೊಹ್ಲಿ ಮತ್ತೆ ಅನುಷ್ಕಾ ಪ್ರೀತಿ ಪಡೆಯಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಅನುಷ್ಕಾ ಪ್ರೀತಿಯನ್ನು ಮರಳಿ ಪಡೆಯಲು ಕೊಹ್ಲಿ ಸರ್ಕಸ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಸದ್ಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿರಾಟ್ ಕೊಹ್ಲಿ ಆಟದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಅದರ ನಡುವೆಯೂ ಕೊಹ್ಲಿ ವಿರಹ ವೇದನೆ ಅನುಭವಿಸಿದ್ದಾರೆ ಎನ್ನಲಾಗಿದೆ. ಕೊಹ್ಲಿ ಹಾಡಿರುವ ವಿರಹ ಗೀತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಂಗ್ಲಾದ ಢಾಕಾದಲ್ಲಿರುವ ಭಾರತೀಯ ರಾಯಭಾರಿ ನಿವಾಸದಲ್ಲಿ ಭಾರತೀಯ ಆಟಗಾರರಿಗೆ ಪಾರ್ಟಿ ಆಯೋಜಿಸಿದ್ದು, ಅಲ್ಲಿ ವಿರಾಟ್ ಕೊಹ್ಲಿ 1963ರಲ್ಲಿ ರಿಲೀಸ್ ಆದ ‘ತಾಜ್ ಮಹಲ್’ ಸಿನೆಮಾದ ‘ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ’ ಗೀತೆಯನ್ನು ಹಾಡಿದ್ದಾರೆ. ಈ ರೀತಿ ವಿರಹ ಗೀತೆಯನ್ನು ಹಾಡಿದ ಕೊಹ್ಲಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೊಹ್ಲಿ ವಿರಹ ಗೀತೆಯನ್ನು ಹಾಡಿರುವುದನ್ನು ವಿಡಿಯೋ ಮಾಡಿಕೊಂಡ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು, ‘ಇದನ್ನು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...