alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ಜಿಮ್ ನಲ್ಲಿ ಬೆವರಿಳಿಸ್ತಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಕೆಲ ತಿಂಗಳು ಕಳೆದಿದೆ. ಆದ್ರೆ ಒಟ್ಟಿಗೆ ಕಾಣಿಸಿಕೊಂಡಿದ್ದು ಅಪರೂಪ. ಕೊಹ್ಲಿ ಪಂದ್ಯದಲ್ಲಿ ಬ್ಯುಸಿಯಿದ್ರೆ ಅನುಷ್ಕಾ ಶೂಟಿಂಗ್ ನಲ್ಲಿರ್ತಾರೆ. ಸಿಕ್ಕ ಸಮಯವನ್ನು ಹಾಳು ಮಾಡದೆ ಸಖತ್ ಎಂಜಾಯ್ ಮಾಡ್ತಾರೆ ವಿರುಷ್ಕಾ.

ಸದ್ಯ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡ್ತಿರುವ ವಿಡಿಯೋವನ್ನು ಕೊಹ್ಲಿ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ವಿಡಿಯೋದಲ್ಲಿ ಕೊಹ್ಲಿ, ಅನುಷ್ಕಾರನ್ನು ಹೊಗಳಿದ್ದಾರೆ.

ಐಪಿಎಲ್ ಮುಗಿಸಿರುವ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಫಿಟ್ನೆಸ್ ಪರೀಕ್ಷೆ ನಡೆಯಲಿದ್ದು, ಅದಕ್ಕೆ ಕೊಹ್ಲಿ ಸಿದ್ಧವಾಗ್ತಿದ್ದಾರೆ. ಇನ್ನು ಬಾಲಿವುಡ್ ಬೆಡಗಿ ಅನುಷ್ಕಾ ಕೈನಲ್ಲಿ ಎರಡು ಚಿತ್ರಗಳಿವೆ. ‘ಜಿರೋ’ ಹಾಗೂ ‘ಸೂಯಿ ದಾಗ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಎರಡೂ ಚಿತ್ರಗಳು ಶೀಘ್ರದಲ್ಲಿಯೇ ತೆರೆಗೆ ಬರಲಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...