alex Certify
ಕನ್ನಡ ದುನಿಯಾ       Mobile App
       

Kannada Duniya

‘100 ಕೋಟಿ ಕ್ಲಬ್’ ಗೆ ವಿರಾಟ್ ಕೊಹ್ಲಿ ಸೇರ್ಪಡೆ

virat-kohliಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿನ ಅವರ ಮನಮೋಹಕ ಆಟದಿಂದಾಗಿ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉತ್ಪನ್ನಗಳ ಜಾಹೀರಾತಿಗಾಗಿ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಮುಗಿ ಬೀಳುತ್ತಿವೆ.

ಗಳಿಕೆಯಲ್ಲಿ ಈಗಾಗಲೇ ‘100 ಕೋಟಿ ಕ್ಲಬ್’ ಸೇರ್ಪಡೆಗೊಂಡಿರುವ ವಿರಾಟ್ ಕೊಹ್ಲಿ 13 ಕ್ಕೂ ಅಧಿಕ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿದ್ದಾರೆ. ಪೆಪ್ಸಿ, ಆಡಿ, ವಿಕ್ಸ್, ಬೂಸ್ಟ್, ಯುಎಸ್ಎಲ್, ಸ್ಮ್ಯಾಶ್, ಟಿವಿಎಸ್, ಟಿಸ್ಸೂಟ್, ನಿತೇಶ್ ಎಸ್ಟೇಟ್ಸ್, ಹರ್ಬಾ ಲೈಫ್, ಕೋಲ್ಗೇಟ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಅವರು ಒಡಂಬಡಿಕೆ ಮಾಡಿಕೊಂಡಿದ್ದಾರೆ.

2014 ರಲ್ಲಿ ಪ್ರಥಮ ಬಾರಿಗೆ ಆಡಿಡಾಸ್ ಕಂಪನಿಯೊಂದಿಗೆ ವಾರ್ಷಿಕ 10 ಕೋಟಿ ರೂ. ಒಪ್ಪಂದ ಮಾಡಿಕೊಂಡು ಜಾಹೀರಾತು ಕ್ಷೇತ್ರ ಪ್ರವೇಶಿಸಿದ್ದ ವಿರಾಟ್ ಕೊಹ್ಲಿ, ತಮ್ಮ ಆಟದ ಕಾರಣಕ್ಕಾಗಿ ದಿನೇ ದಿನೇ ಜನಪ್ರಿಯತೆ ಗಳಿಸಿದ ಕಾರಣ ಅವರ ಜಾಹೀರಾತು ಮೌಲ್ಯವೂ ಹೆಚ್ಚಿದೆ. ಸದ್ಯ ಭಾರತದಲ್ಲಿ ಅತಿ ಹೆಚ್ಚು ಹಣ ಪಡೆಯುತ್ತಿರುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸಾಲಿನಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...