alex Certify
ಕನ್ನಡ ದುನಿಯಾ       Mobile App
       

Kannada Duniya

ನಾಟಿಂಗ್ ಹ್ಯಾಮ್ ನಲ್ಲಿ ‘ವಿರಾಟ್’ ವೀರಾವೇಶ…!

ನಾಟಿಂಗ್ ಹ್ಯಾಮ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್, ಟೀಮ್ ಇಂಡಿಯಾಗೆ ಆಧಾರವಾಗಿದ್ದಾರೆ. ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರ ನೀಡಿರುವ ವಿರಾಟ್ ಆರ್ಭಟಿಸಿದ್ದಾರೆ. ಮೂರನೇ ಟೆಸ್ಟ್ ನಲ್ಲಿ ವಿರಾಟ್ ತಮ್ಮ ವಿಶ್ವ ರೂಪ ದರ್ಶನವನ್ನು ಮತ್ತೊಮ್ಮೆ ಎದುರಾಳಿ ತಂಡಕ್ಕೆ ಮಾಡಿ ಕೊಟ್ಟಿದ್ದು, ಇಂಗ್ಲೆಂಡ್ ನೆಲದಲ್ಲಿ ಎರಡನೇ ಶತಕ ಸಿಡಿಸಿದ್ದಾರೆ.

ರೂಟ್ ಪಡೆ ಹೆಣೆದುಕೊಂಡಿದ್ದ ಯೋಜನೆಯನ್ನು ಬುಡಮೇಲು ಮಾಡಿದ ಸ್ಟಾರ್ ಬ್ಯಾಟ್ಸ್ ಮನ್ ತನ್ನ ಘನತೆಗೆ ತಕ್ಕ ಆಟ ಆಡಿದ್ದಾರೆ. ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ವಿರಾಟ್, ಪಿಚ್ ನ ಸಂಪೂರ್ಣ ಲಾಭ ಪಡೆದಿದ್ದಾರೆ. ಆನ್ ಸೈಡ್ ಹಾಗೂ ಆಫ್ ಸೈಡ್ ನಲ್ಲಿ ರನ್ ಗಳನ್ನು ಗುಡ್ಡೆ ಹಾಕಿದ ವಿರಾಟ್, ಟೀಮ್ ಇಂಡಿಯಾ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಮಹತ್ತರ ಕಾಣಿಕೆ ನೀಡಿದ್ದಾರೆ.

ಬೌನ್ಸಿ ಟ್ರ್ಯಾಕ್ ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಕೊಹ್ಲಿ, ಈ ಬಾರಿ ತಮ್ಮಲ್ಲಿನ ಬ್ಯಾಟಿಂಗ್ ಕೌಶಲ್ಯವನ್ನು ಆತಿಥೇಯ ತಂಡಕ್ಕೆ ಪರಿಚಯಿಸಿದ್ರು. ಇಂಗ್ಲೆಂಡ್ ತಂಡದ ವೇಗಿಗಳು ಹಾಫ್ ಸ್ಟಂಪ್ ಆಚೆ ಎಸೆತಗಳನ್ನು ಎಸೆದ್ರೆ, ಎಚ್ಚರಿಕೆಯಿಂದ ಬಿಡುವಲ್ಲಿ ಕೊಹ್ಲಿ ಸಫಲರಾದ್ರು.

ತಮ್ಮ ವೃತ್ತಿ ಜೀವನದ 23 ನೇ ಟೆಸ್ಟ್ ಶತಕ ದಾಖಲಿಸಿರುವ ವಿರಾಟ್, ಪ್ರವಾಸಕ್ಕೂ ಮುನ್ನ ಎದ್ದಿದ್ದ ಪ್ರಶ್ನೆಗಳಿಗೆ ಬ್ಯಾಟ್ ಎಂಬ ಮಾಯಾ ದಂಡದಿಂದಲೇ ಉತ್ತರ ನೀಡಿದ್ದಾರೆ. ಸರಣಿಯ ಮೊದಲ ಟೆಸ್ಟ್ ನಲ್ಲಿ ಶತಕ ಬಾರಿಸಿದ್ದ ಚೇಸಿಂಗ್ ಸ್ಟಾರ್, ಎರಡನೇ ಟೆಸ್ಟ್ ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದ್ರೆ, ಮೂರನೇ ಟೆಸ್ಟ್ ನಲ್ಲಿ ಮತ್ತೊಮ್ಮೆ ವೀರಾವೇಶದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...