alex Certify
ಕನ್ನಡ ದುನಿಯಾ       Mobile App
       

Kannada Duniya

21 ವರ್ಷಗಳ ನಂತ್ರ ದ. ಆಫ್ರಿಕಾ ನೆಲದಲ್ಲಿ ದಾಖಲೆ ಬರೆದ ಕೊಹ್ಲಿ

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಎರಡನೇ ಟೆಸ್ಟ್ ನ ಮೂರನೇ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದ 21ನೇ ಶತಕ ಸಿಡಿಸುವ ಜೊತೆಗೆ ದಕ್ಷಿಣಾಫ್ರಿಕಾ ನೆಲದಲ್ಲಿ ಒಂದು ದಾಖಲೆ ಮಾಡಿದ್ದಾರೆ.

ಕ್ರಿಕೆಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಂತ್ರ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿದ ಎರಡನೇ ಭಾರತದ ಆಟಗಾರರಾಗಿದ್ದಾರೆ ವಿರಾಟ್ ಕೊಹ್ಲಿ. ಸಚಿನ್ ತೆಂಡೂಲ್ಕರ್ 21 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿದ್ದರು. ಈಗ ಕೊಹ್ಲಿ ಶತಕ ಸಿಡಿಸಿದ್ದಾರೆ.

21 ವರ್ಷಗಳ ನಂತ್ರ ರಾಹುಲ್ ದ್ರಾವಿಡ್ ರಿಂದ ಹಿಡಿದು ಧೋನಿಯವರೆಗೆ ಯಾರೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಶತಕ ಸಿಡಿಸಿರಲಿಲ್ಲ. ಈಗ ಕೊಹ್ಲಿ ಶತಕ ದಾಖಲಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ಟೆಸ್ಟ್ ವೃತ್ತಿ ಜೀವನದಲ್ಲಿ 21ನೇ ಶತಕ ಸಿಡಿಸಿದ ಡೇವಿಡ್ ವಾರ್ನರ್, ಹಾರ್ವೆ, ಗ್ಯಾರಿ ಕಿರ್ಸ್ಟನ್, ಆಂಡ್ರ್ಯೂ ಸ್ಟ್ರಾಸ್, ಎಬಿ ಡಿ ವಿಲಿಯರ್ಸ್ ಮತ್ತು ಡೇವಿಡ್ ಬೋನ್ ಸಾಲಿಗೆ ಕೊಹ್ಲಿ ಸೇರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...