alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್, ಏಕದಿನ, ಟಿ-20ಯಲ್ಲಿ ಯಾವುದು ಕೊಹ್ಲಿ ಬೆಸ್ಟ್ ಕ್ರಿಕೆಟ್ ?

ಇಂಗ್ಲೆಂಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಟೆಸ್ಟ್ ಸೋಲಿನ ನಂತ್ರ ಅನೇಕ ಪ್ರಶ್ನೆಗಳು ಶುರುವಾಗಿವೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮಗೆ ಇಷ್ಟವಾಗುವ ಕ್ರಿಕೆಟ್ ಯಾವುದು ಎಂಬುದನ್ನು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಗೆ ಪ್ರಾಮುಖ್ಯತೆ ಸಿಗ್ತಿಲ್ಲ ಎಂಬ ಸಂಗತಿ ಅನೇಕ ದಿನಗಳಿಂದ ಚರ್ಚೆಯಾಗ್ತಿದೆ. ಇದಕ್ಕೆ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟೆಸ್ಟ್ ನನ್ನ ನೆಚ್ಚಿನ ಕ್ರಿಕೆಟ್ ಎಂದು ಕೊಹ್ಲಿ ಹೇಳಿದ್ದಾರೆ. ಟೆಸ್ಟ್ ಅಧ್ಬುತ ಆಟ. ಟೆಸ್ಟ್ ಕ್ರಿಕೆಟ್ ಆಡಲು ನನಗೆ ಇಷ್ಟವಾಗುತ್ತದೆ. ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್ ವೀಕ್ಷಿಸಲು ನಾನು ಬಯಸುತ್ತೇನೆಂದು ಕೊಹ್ಲಿ ಹೇಳಿದ್ದಾರೆ.

ಇದೇ ವೇಳೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಕೂಡ ಟೆಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ ಈಗ ಸತ್ತು ಹೋಗಿದೆ. ಮತ್ತೆ ಟೆಸ್ಟ್ ನಲ್ಲಿ ಹಳೇ ಸ್ಥಿತಿ ನೋಡಬೇಕಿದೆ ಎಂದು ಜೋ ರೂಟ್ ಹೇಳಿದ್ದಾರೆ. ಇಂಗ್ಲೆಂಡ್ ನ ಮಾಜಿ ಆಟಗಾರ ಮೈಕೆಲ್ ವಾಘನ್ ಕೂಡ ಏಕದಿನ ಪಂದ್ಯಗಳಲ್ಲಿ  ಟೆಸ್ಟ್ ಕ್ರಿಕೆಟ್ ನಂತಹ ವಾತಾವರಣ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...