alex Certify
ಕನ್ನಡ ದುನಿಯಾ       Mobile App
       

Kannada Duniya

”ಪಾಕ್ ವಿರುದ್ಧದ ಪಂದ್ಯ ಒಂದು ಸಾಮಾನ್ಯ ಮ್ಯಾಚ್”

virat_kohli_icc_1497584103_749x421

ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದಿರುವ ಟೀಂ ಇಂಡಿಯಾ ಚಿತ್ತ ಈಗ ಫೈನಲ್ ಮೇಲಿದೆ. ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಅಂತಿಮ ಹಣಾಹಣಿ ನಡೆಸಲಿದೆ. ಭಾರತ –ಪಾಕಿಸ್ತಾನ ಹಣಾಹಣಿ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೊಂದು ಸಾಮಾನ್ಯ ಪಂದ್ಯದಂತೆ ಪರಿಗಣಿಸಿರುವುದಾಗಿ ಹೇಳಿದ್ದಾರೆ.

ಜೂನ್ 18ರಂದು ಭಾರತ-ಪಾಕ್ ಸೆಣೆಸಲಿದೆ. ಈ ಬಗ್ಗೆ ಮಾತನಾಡಿದ ಕೊಹ್ಲಿ ನಾವು ಈ ಪಂದ್ಯವನ್ನು ಸಾಮಾನ್ಯ ಪಂದ್ಯದಂತೆ ಪರಿಗಣಿಸಿದ್ದೇವೆ. ಈ ಪಂದ್ಯದ ಬಗ್ಗೆ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಗೆಲುವಿನ ಬಗ್ಗೆ ಮಾತನಾಡಿದ ಕೊಹ್ಲಿ, ಇದು ಉತ್ತಮ ಆಟಕ್ಕೆ ಉದಾಹರಣೆ. 9 ವಿಕೆಟ್ ಗಳಿಂದ ಗೆಲುವು ಸಾಧಿಸುವ ನಿರೀಕ್ಷೆ ಇರಲಿಲ್ಲ. ಆದ್ರೆ ಟೀಂ ಸಾಮರ್ಥ್ಯವನ್ನು ತೋರಿಸಿದೆ ಎಂದಿದ್ದಾರೆ.

ಟೂರ್ನಿಯಲ್ಲಿ ಈಗಾಗಲೇ ಪಾಕ್ ಸೋಲಿಸಿದ್ದ ಭಾರತ ಐ.ಸಿ.ಸಿ. ಟೂರ್ನಿಗಳಲ್ಲಿ ಎಂದಿಗೂ ಪಾಕ್ ಎದುರು ಸೋಲು ಕಂಡಿಲ್ಲ. ಹಾಗಾಗಿ ಭಾನುವಾರದ ಪಂದ್ಯದಲ್ಲಿಯೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನು ಭಾನುವಾರದ ಹೈವೋಲ್ಟೇಜ್ ಮ್ಯಾಚ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...