alex Certify
ಕನ್ನಡ ದುನಿಯಾ       Mobile App
       

Kannada Duniya

ಗಳಿಕೆಯಲ್ಲಿ ಸಚಿನ್, ಧೋನಿಗೂ ಸೆಡ್ಡು ಹೊಡೆದ ಕೊಹ್ಲಿ

ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಗೆ ತಕ್ಕಂತೆ ಆಡ್ತಿರೋ ವಿಶ್ವದರ್ಜೆಯ ಕ್ರಿಕೆಟರ್. ಕ್ರೀಡಾ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಒಂಥರಾ ಬ್ರಾಂಡ್ ನೇಮ್. ಪ್ರತಿಬಾರಿ ಮೈದಾನಕ್ಕಿಳಿದಾಗ್ಲೂ ಒಂದಿಲ್ಲೊಂದು ಹೊಸ ದಾಖಲೆ ಬರೆಯೋದು ಕೊಹ್ಲಿ ಸ್ಪೆಷಾಲಿಟಿ.

ಹತ್ತಾರು ಜಾಹೀರಾತುಗಳಲ್ಲಿ ಕೂಡ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಅತಿ ಹೆಚ್ಚು ಸಂಪಾದನೆ ಮಾಡಿರೋ ಸೆಲೆಬ್ರಿಟಿಗಳಲ್ಲಿ ವಿರಾಟ್ ಕೂಡ ಒಬ್ಬರು. ಫೋರ್ಬ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೊಹ್ಲಿ 3ನೇ ಸ್ಥಾನ ಪಡೆದಿದ್ದಾರೆ.

ಮೊದಲ ಎರಡು ಸ್ಥಾನಗಳು ನಟ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್  ಪಾಲಾಗಿದೆ. ಮೂರನೇ ಸ್ಥಾನದಲ್ಲಿರೋ ಕೊಹ್ಲಿ ಸಂಪಾದನೆ ಈ ವರ್ಷ 100.72 ಕೋಟಿ ರೂಪಾಯಿ. ಸುಮಾರು 20 ಜಾಹೀರಾತುಗಳಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಅತಿ ಹೆಚ್ಚು ಗಳಿಕೆ ಮಾಡಿರೋ ಸೆಲೆಬ್ರಿಟಿಗಳು ಯಾರ್ಯಾರು ಅನ್ನೋದನ್ನು ನೋಡೋಣ.

ಸಲ್ಮಾನ್ ಖಾನ್ – 232.83 ಕೋಟಿ ರೂ.

ಶಾರುಖ್ ಖಾನ್ – 170.5

ವಿರಾಟ್ ಕೊಹ್ಲಿ – 100.72

ಅಕ್ಷಯ್ ಕುಮಾರ್ – 98.25

ಸಚಿನ್ ತೆಂಡೂಲ್ಕರ್ – 82.5

ಅಮೀರ್ ಖಾನ್ – 68.75

ಪ್ರಿಯಾಂಕಾ ಚೋಪ್ರಾ – 68

ಮಹೇಂದ್ರ ಸಿಂಗ್ ಧೋನಿ – 63.77

ಹೃತಿಕ್ ರೋಶನ್ – 63.12

ರಣವೀರ್ ಸಿಂಗ್ – 62.63

ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿರೋ ಇನ್ನಿಬ್ಬರು ಕ್ರಿಕೆಟರ್ ಗಳೆಂದ್ರೆ ಧೋನಿ ಹಾಗೂ ಸಚಿನ್ ತೆಂಡೂಲ್ಕರ್. ಇವರಿಗಿಂತ್ಲೂ ವಿರಾಟ್ ಮುಂದಿದ್ದಾರೆ. ಸಚಿನ್ 5ನೇ ಸ್ಥಾನದಲ್ಲಿದ್ದರೆ, ಧೋನಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...