alex Certify
ಕನ್ನಡ ದುನಿಯಾ       Mobile App
       

Kannada Duniya

1998ರ ಸಚಿನ್ ಆಟ ಹೋಲುತ್ತಿದೆ ಕೊಹ್ಲಿ ಫಾರ್ಮ್

kohli sachin mn 120

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾಡಿದ ಸಾಧನೆ ಒಂದೆರಡಲ್ಲ. ಕ್ರಿಕೆಟ್ ನಲ್ಲಿ ಹಲವಾರು ವಿಶ್ವ ದಾಖಲೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರ ಆಟದೊಂದಿಗೆ ಈಗಿನ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಅವರ ಆಟವನ್ನು ಹೋಲಿಕೆ ಮಾಡಲಾಗುತ್ತದೆ.

ಸಚಿನ್ ತೆಂಡೂಲ್ಕರ್ ವೃತ್ತಿ ಜೀವನದಲ್ಲಿ 1998 ಮಹತ್ವದ ವರ್ಷ. ಆ ವರ್ಷದಲ್ಲಿ ಸಚಿನ್ ಏಕದಿನ ಪಂದ್ಯದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. 9 ಶತಕಗಳೊಂದಿಗೆ ಸಚಿನ್ 1434 ರನ್ ಸಿಡಿಸಿದ್ದಾರೆ. ಅಂದಿನ ಸಚಿನ್ ಆಟ ಈ ವರ್ಷದ ವಿರಾಟ್ ಕೊಹ್ಲಿ ಅವರ ಟಿ-20 ಆಟದಂತಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಸಚಿನ್ ತೆಂಡೂಲ್ಕರ್ ಅವರಂತೆಯೇ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದು, ಟಿ-20ಯಲ್ಲಿ ರನ್ ಹೊಳೆ ಹರಿಸಿದ್ದಾರೆ.

ಐಪಿಎಲ್ ನಲ್ಲಿ ಕೊಹ್ಲಿ ಬರೋಬ್ಬರಿ 4 ಸೆಂಚುರಿ ಬಾರಿಸಿದ್ದಾರೆ. 864 ರನ್ ಗಳಿಸಿರುವ ಅವರು, ಅದಕ್ಕಿಂತ ಹಿಂದೆ ನಡೆದ ಟಿ-20 ವಿಶ್ವಕಪ್ ನಲ್ಲೂ ಅವರು ಮಿಂಚಿದ್ದರು. ಈ ವರ್ಷ ಮುಗಿಯಲು ಇನ್ನೂ 7 ತಿಂಗಳು ಬಾಕಿ ಇದ್ದು, ಕೊಹ್ಲಿ ಬ್ಯಾಟಿಂಗ್ ಕಮಾಲ್ ಹೀಗೆ ಮುಂದುವರೆದರೆ ಇನ್ನಷ್ಟು ಶತಕ ಬಾರಿಸೋದು ಗ್ಯಾರಂಟಿ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...