alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ತಡೇ ದಿನವೇ ನಿವೃತ್ತಿ ಬಹಿರಂಗಪಡಿಸಿದ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5 ರಂದು 29 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನಿವೃತ್ತಿಯ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಹಿಂದಿನ ದಿನ ಗೌರವ್ ಕಪೂರ್ ಅವರೊಂದಿಗೆ ‘ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್’ ಪ್ರೋಗ್ರಾಂನಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ, ನಾನು ಉತ್ತಮವಾಗಿ ಕ್ರಿಕೆಟ್ ಆಡಲು ಬಯಸುತ್ತೇನೆ. ದೇಹ ಸ್ಪಂದಿಸದಿದ್ದರೆ ದೂರ ಉಳಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಉತ್ಸಾಹ ಕಳೆದುಕೊಂಡ ನಂತರವೂ ಕ್ರಿಕೆಟ್ ಆಡಲು ಆಗುವುದಿಲ್ಲ. ದೈಹಿಕವಾಗಿ ಸದೃಢನಾಗಿರುವವರೆಗೆ ಕ್ರಿಕೆಟ್ ಆಡುತ್ತೇನೆ. ಸಾಮರ್ಥ್ಯವಿಲ್ಲದಿದ್ದರೆ, ಕ್ರಿಕೆಟ್ ಮುಂದುವರೆಸುವುದಿಲ್ಲ. ನಿವೃತ್ತನಾಗಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಯಶಸ್ವಿ ಕ್ರಿಕೆಟಿಗರಾಗಿರುವ ವಿರಾಟ್ ಕೊಹ್ಲಿ ಬದ್ಧತೆ ಮತ್ತು ಶಿಸ್ತಿನಿಂದ ದೈಹಿಕ ಸದೃಢತೆ ಹೊಂದಿದ್ದಾರೆ. ಮೈದಾನದಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

60 ಟೆಸ್ಟ್, 202 ಏಕದಿನ ಮತ್ತು 53 ಟಿ -20 ಪಂದ್ಯಗಳನ್ನಾಡಿರುವ ಕೊಹ್ಲಿ ಕ್ರಮವಾಗಿ 4658, 9030, 1878 ರನ್ ಗಳಿಸಿದ್ದಾರೆ. ಏಕದಿನದಲ್ಲಿ 32 ಶತಕ ಗಳಿಸಿದ್ದಾರೆ. ಸಚಿನ್ 49 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...