alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ಗುಟ್ಟು ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ ಹಾಗೂ ಹ್ಯಾಂಡ್ಸಮ್ ಆಟಗಾರ. ಫಿಟ್ನೆಸ್ ಗಾಗಿ ವಿರಾಟ್ ಕೊಹ್ಲಿ ವರ್ಕ್ ಔಟ್ ಮಾಡ್ತಾರೆ. ಜೊತೆಗೆ ಡಯೆಟ್ ಪಾಲನೆ ಮಾಡ್ತಾರೆ. ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಶೋನಲ್ಲಿ ಪಾಲ್ಗೊಂಡಿದ್ದ ವಿರಾಟ್ ಕೊಹ್ಲಿ ತಮ್ಮ ಡಯೆಟ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಏನೆಲ್ಲ ತಿನ್ನುತ್ತೇನೆ ಎಂಬುದನ್ನು ವಿವರಿಸಿದ್ದಾರೆ. ಬೆಳಿಗ್ಗೆ ಎದ್ದ ನಂತ್ರ ಆಮ್ಲೆಟ್, ಕರಿಮೆಣಸು ಹಾಗೂ ಚೀಸ್ ತಿನ್ನುತ್ತಾರಂತೆ ಕೊಹ್ಲಿ. ಇದ್ರ ನಂತ್ರ 3-4 ಕಪ್ ನಿಂಬೆ ರಸದ ಜೊತೆ ಗ್ರೀನ್ ಟೀ ಕುಡಿಯುತ್ತಾರಂತೆ. ಕೆಲವೊಮ್ಮೆ ಮೀನು, ಕಲ್ಲಂಗಡಿ, ಪಪ್ಪಾಯಿ ಹಾಗೂ ಹೊಟ್ಟೆ ತುಂಬಲು ಎಕ್ಸ್ಟ್ರಾ ಚೀಸ್ ತಿನ್ನುತ್ತಾರಂತೆ. ಹೊಟೇಲ್ ಗೆ ಹೋಗುವಾಗ ತಮ್ಮ ಜೊತೆ ನಟ್ ಬಟರ್ ಹಾಗೂ ಬ್ರೆಡ್ ಕೊಂಡೊಯ್ಯುತ್ತಾರಂತೆ.

ಮಧ್ಯಾಹ್ನ ಕೊಹ್ಲಿ ಸುಟ್ಟ ಮೀನು, ಚಿಕನ್ ತಿನ್ನುತ್ತಾರಂತೆ. ಇದ್ರ ಜೊತೆ ಬೇಯಿಸಿದ ಆಲೂಗಡ್ಡೆ, ಪಾಲಕ್ ಹಾಗೂ ಹಸಿರು ತರಕಾರಿಯನ್ನು ತಿನ್ನುತ್ತಾರಂತೆ. ಮಸಲ್ ಗಾಗಿ ಕೊಹ್ಲಿ ರೆಡ್ ಮೀಟ್ ತಿನ್ನುತ್ತಾರಂತೆ.

ಸಂಜೆ ಊಟಕ್ಕೆ ಮೀನನ್ನು ತಿನ್ನಲು ವಿರಾಟ್ ಇಷ್ಟಪಡ್ತಾರಂತೆ. ವಿರಾಟ್ ಆಹಾರ ಪ್ರಿಯರಂತೆ. ಮಸಾಲೆಯುಕ್ತ, ಚಾಟ್ ಆಹಾರವೆಂದ್ರೆ ಪ್ರೀತಿಯಂತೆ. ಆದ್ರೆ ಫಿಟ್ನೆಸ್ ಗಾಗಿ ಈ ಎಲ್ಲ ಆಹಾರದಿಂದ ದೂರವಿದ್ದೇನೆಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...