alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತದಲ್ಲಿ ವಿರಾಟ್ – ಗಂಭೀರ್ ಟೀಂ ಫೈಟ್

rcb-kkr-kolk

ಕೋಲ್ಕತ್ತ: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗೌತಮ್ ಗಂಭೀರ್ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಭಾನುವಾರ ರಾತ್ರಿ ಪೈಪೋಟಿಯ ಪಂದ್ಯ ನಡೆಯಲಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾತ್ರಿ 8 ಗಂಟೆಗೆ ಐ.ಪಿ.ಎಲ್. ಪಂದ್ಯ ಆರಂಭವಾಗಲಿದ್ದು, ಆರ್.ಸಿ.ಬಿ. ಆಟಗಾರ ಕ್ರಿಸ್ ಗೇಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಟಿ -20 ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರನಾಗಿರುವ ಗೇಲ್ ಇಂದಿನ ಪಂದ್ಯದಲ್ಲಿ ಕಮಾಲ್ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ಲೇ ಆಫ್ ಹಂತ ತಲುಪಲು ಆರ್.ಸಿ.ಬಿ. ಉಳಿದಿರುವ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಕೇದಾರ್ ಜಾಧವ್, ಟ್ರಾವಿಸ್ ಹೆಡ್ ಬ್ಯಾಟಿಂಗ್ ಗೆ ಬಲ ತುಂಬಬೇಕಿದೆ.

ಇನ್ನು ಗೌತಮ್ ಗಂಭೀರ್ ಟೀಂ ಕಳೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಸೋಲು ಕಂಡಿತ್ತು. ರಾಬಿನ್ ಉತ್ತಪ್ಪ, ಗೌತಮ್ ಗಂಭೀರ್, ಯೂಸುಫ್ ಪಠಾಣ್, ಸುನಿಲ್ ನಾರಾಯಣ್ ಕೋಲ್ಕತಾ ತಂಡದ ಶಕ್ತಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...