alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪದ ಸೋಲು, ಸಾರಿ ಕೇಳಿದ ಕೊಹ್ಲಿ

kohli-rcb

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಸೋಲು ಕಂಡಿದೆ.

ಕೋಲ್ಕತ್ತ ನೈಟ್ ರೈಡರ್ಸ್ 6 ವಿಕೆಟ್ ಅಂತರದಿಂದ ಜಯಗಳಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಮನ್ ದೀಪ್ ಸಿಂಗ್ 52, ಟ್ರಾವಿಸ್ ಹೆಡ್ ಅಜೇಯ 75 ರನ್ ಗಳಿಸಿದ್ದಾರೆ.

159 ರನ್ ಗೆಲುವಿನ ಗುರಿ ಪಡೆದ ಕೋಲ್ಕತ್ತ 15.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕ್ರಿಸ್ ಲಿನ್ 50, ಸುನಿಲ್ ನರೈನ್ 54, ಗ್ರ್ಯಾಂಡ್ ಹೋಮ್ 31, ಗೌತಮ್ ಗಂಭೀರ್ 14 ರನ್ ಗಳಿಸಿದರು.

ಐ.ಪಿ.ಎಲ್.ನ ಈ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದಿರುವ ಆರ್.ಸಿ.ಬಿ. 10 ಪಂದ್ಯಗಳಲ್ಲಿ ಸೋಲು ಕಂಡಿದೆ. 1 ಪಂದ್ಯ ಮಳೆಯಿಂದ ರದ್ದಾಗಿದೆ. ಸೋಲಿನಿಂದ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಆರ್.ಸಿ.ಬಿ. ತಂಡ ಬೆಂಬಲಿಸಿರುವ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದಿರುವ ಅವರು, ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನಮ್ಮಿಂದ ಸಾಮರ್ಥ್ಯ ಪ್ರದರ್ಶಿಸಲು ಆಗಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...