alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ನಾಯಕತ್ವಕ್ಕೆ ಕೊಕ್ ನೀಡಿದ ಆರ್.ಸಿ.ಬಿ.?

ಟೀಂ ಇಂಡಿಯಾ, ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸೋಲುಂಡಿದೆ. ಐದನೇ ಹಾಗೂ ಕೊನೆ ಟೆಸ್ಟ್ ನ ಎರಡನೇ ದಿನ ಭಾರತದ ವಿರುದ್ಧ ಇಂಗ್ಲೆಂಡ್ ಹಿಡಿತ ಸಾಧಿಸಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ಸ್ಥಾನದಿಂದ ಕೊಹ್ಲಿಯನ್ನು ವಜಾ ಮಾಡಿದೆ ಎಂಬ ಸುದ್ದಿಯಿದೆ.

ಈ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರುವ ಮೊದಲೇ ಆರ್.ಸಿ.ಬಿ. ಇದಕ್ಕೆ ಸ್ಪಷ್ಟನೆ ನೀಡಿದೆ. ಕೊಹ್ಲಿ ಬಗ್ಗೆ ಹರಿದಾಡ್ತಿರುವ ಸುದ್ದಿ ಸುಳ್ಳು. ಮುಂದಿನ ಸರಣಿಗೂ ಕೊಹ್ಲಿಯೇ ಆರ್.ಸಿ.ಬಿ. ತಂಡದ ನಾಯಕರೆಂದು ಆರ್.ಸಿ.ಬಿ. ವಕ್ತಾರರು ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಕೊಹ್ಲಿಗೆ ಕೊಕ್ ಕೊಟ್ಟು ಎಬಿ ಡಿವಿಲಿಯರ್ಸ್ ಗೆ ನಾಯಕ ಸ್ಥಾನ ನೀಡಲಾಗಿದೆ. ಶೀಘ್ರವೇ ಅಧಿಕೃತ ಘೋಷಣೆ ನಡೆಯಲಿದೆ ಎನ್ನಲಾಗ್ತಾಯಿತ್ತು.

ಕೊಹ್ಲಿ ಆರ್.ಸಿ.ಬಿ.ಯಲ್ಲಿ 2008ರಿಂದ ಆಟವಾಡ್ತಿದ್ದಾರೆ. 6 ಸರಣಿಗಳನ್ನು ನಾಯಕನಾಗಿ ಮುನ್ನೆಡೆಸಿದ್ದಾರೆ. ಕೊಹ್ಲಿ, ಎಬಿ ಡಿವಿಲಿಯರ್ಸ್ ನಂತಹ ದಿಗ್ಗಜ ಆಟಗಾರರಿದ್ದರೂ ಆರ್.ಸಿ.ಬಿ. ಒಮ್ಮೆಯೂ ಚಾಂಪಿಯನ್ ಆಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...