alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸುದ್ದಿಗೊಷ್ಠಿ ನಡೆಸಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಫಿಟ್ ಆಗಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಉತ್ಸಾಹಿತರಾಗಿದ್ದಾರೆ. ಶನಿವಾರ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಪ್ರವಾಸಕ್ಕೂ ಮೊದಲು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೊಹ್ಲಿ ಭಾರತ ತಂಡದ ಯಶಸ್ಸಿಗೆ ಒಗ್ಗಟ್ಟಿನ ಹೋರಾಟದ ಅವಶ್ಯಕತೆಯಿದೆ ಎಂದಿದ್ದಾರೆ.

ಶೇಕಡಾ 100 ರಷ್ಟು ಫಿಟ್ ಆಗಿದ್ದೇನೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಸಿದ್ಧನಾಗಿದ್ದೇನೆ. ನನ್ನ ಕುತ್ತಿಗೆ ಈಗ ಸರಿಯಾಗಿದೆ. ಉತ್ತಮ ಅಭ್ಯಾಸ ಮಾಡಿದ್ದೇನೆ. ಮುಂಬೈನಲ್ಲಿ 6-7 ಸೆಶನ್ಸ್ ಆಡಿದ್ದೇನೆಂದು ಕೊಹ್ಲಿ ಹೇಳಿದ್ದಾರೆ. ಇಂಥ ವಿರಾಮ ಮಾನಸಿಕವಾಗಿ ನಮ್ಮನ್ನು ಫ್ರೆಶ್ ಮಾಡುತ್ತದೆ. ಪಿಚ್ ಗೆ ಹಿಂದಿರುಗಲು ನನ್ನನ್ನು ಪ್ರೋತ್ಸಾಹಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಇದೊಂದು ತಂಡದ ಆಟ. ಇಲ್ಲಿ ನಾನು ಹೇಗೆ ಆಟವಾಡ್ತೇನೆ ಅಥವಾ ಇಡೀ ಪ್ರವಾಸದಲ್ಲಿ ಒಬ್ಬ ಆಟಗಾರ ಹೇಗೆ ಆಟವಾಡಿದಾ ಎಂಬುದು ಮುಖ್ಯವಲ್ಲ. ಒಂದು ತಂಡವಾಗಿ ನಾವು ಉತ್ತಮ ಪ್ರದರ್ಶನ ತೋರಬೇಕಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಈ ಬಗ್ಗೆ ನಾವು ಹೆಚ್ಚು ಗಮನ ನೀಡುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.

ಸ್ವಿಂಗ್ ಭಾರತ ತಂಡಕ್ಕೊಂದೇ ಅಲ್ಲ ಎಲ್ಲ ತಂಡದ ಸಮಸ್ಯೆ. ತಂಡ ಲಯದಲ್ಲಿದ್ದರೆ ಯಾವುದೂ ಕಷ್ಟವಲ್ಲವೆಂದು ಕೊಹ್ಲಿ ಹೇಳಿದ್ದಾರೆ. ಜೂನ್ 23 ರಂದು ಬ್ರಿಟನ್ ಗೆ ಟೀಂ ಇಂಡಿಯಾ ತೆರಳಲಿದೆ. ಮೂರು ತಿಂಗಳುಗಳ ಕಾಲ ಟೀಂ ಇಂಡಿಯಾ ಇಂಗ್ಲೆಂಡ್ –ಐರ್ಲೆಂಡ್ ಪ್ರವಾಸದಲ್ಲಿರಲಿದೆ.  ಐರ್ಲೆಂಡ್ ವಿರುದ್ಧ ಜೂನ್ 27 ಹಾಗೂ 29 ರಂದು ಭಾರತ ಟಿ-20 ಪಂದ್ಯವನ್ನಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...