alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಲ್ಲೆ ಭಲ್ಲೆ….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹುಮುಖ ಪ್ರತಿಭೆ. ಕ್ರಿಕೆಟ್ ಅವರ ಬದುಕು. ಇದರ ಜೊತೆ ಜೊತೆಗೆ ಕೊಹ್ಲಿಗೆ ಡಾನ್ಸ್ ಕೂಡ ಫೇವರಿಟ್ ಹಾಬಿ. ಪಾರ್ಟಿ, ಫಂಕ್ಷನ್ ಗಳಲ್ಲಿ ಆಗಾಗ ಕೊಹ್ಲಿ ಸ್ಟೆಪ್ಸ್ ಹಾಕ್ತಾನೇ ಇರ್ತಾರೆ.

ಅಭಿಮಾನಿಗಳಂತೂ ಕೊಹ್ಲಿಯ ಅದ್ಭುತ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ. ಕೊಹ್ಲಿ ಈಗ ಭಾಂಗ್ಡಾ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂಬೈನಲ್ಲಿ ನಡೆದ ಚಾರಿಟಿ ಫುಟ್ಬಾಲ್ ಮ್ಯಾಚ್ ನಲ್ಲಿ ಸಖತ್ತಾಗಿ ಕುಣಿದಿದ್ದಾರೆ.

ಆಲ್ ಹಾರ್ಟ್ಸ್ ಎಫ್ ಸಿ ಹಾಗು ಆಲ್ ಸ್ಟಾರ್ಸ್ ತಂಡಗಳ ಮಧ್ಯೆ ಪಂದ್ಯ ನಡೆದಿತ್ತು. ಗೋಲ್ ಬಾರಿಸಿದ ಕೊಹ್ಲಿ ಪ್ರೇಕ್ಷಕರತ್ತ ತಿರುಗಿ ಭಾಂಗ್ಡಾ ಪ್ರದರ್ಶಿಸಿದ್ದಾರೆ. ಕೊಹ್ಲಿಯ ಡಾನ್ಸ್ ಮೂವ್ಸ್ ಈಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...