alex Certify
ಕನ್ನಡ ದುನಿಯಾ       Mobile App
       

Kannada Duniya

36 ಕೋಟಿ ಮೌಲ್ಯದ ಮನೆಯಿದ್ರೂ ಬಾಡಿಗೆ ಮನೆಯಲ್ಲಿ ಕೊಹ್ಲಿ ವಾಸ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಮುಂಬೈನಲ್ಲಿ ಪತ್ನಿ ಅನುಷ್ಕಾ ಜೊತೆ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಕೊಹ್ಲಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ ಫೋಟೋವೊಂದು ಚರ್ಚೆಗೆ ಕಾರಣವಾಗಿದೆ. ಕೊಹ್ಲಿ ಬಾಲ್ಕನಿ ಮೇಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. ಇದು ಮುಂಬೈನಲ್ಲಿರುವ ಕೊಹ್ಲಿ ಹೊಸ ಮನೆ ಎನ್ನಲಾಗ್ತಾಯಿತ್ತು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಕಿರುವ ಫೋಟೋ ಕೊಹ್ಲಿ ಸ್ವಂತ ಮನೆಯದ್ದಲ್ಲ. ಬಾಡಿಗೆ ಮನೆಯ ಫೋಟೋ ಎಂಬುದು ಈಗ ಬಹಿರಂಗವಾಗಿದೆ. ಕೊಹ್ಲಿ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕೊಹ್ಲಿ ಈ ಮನೆ ಬಾಡಿಗೆ ತಿಂಗಳಿಗೆ 15 ಲಕ್ಷ ರೂಪಾಯಿ.

ಕೊಹ್ಲಿ 1.50 ಕೋಟಿ ರೂಪಾಯಿಯನ್ನು ಠೇವಣಿಯಾಗಿಟ್ಟಿದ್ದಾರೆ. 1.01 ಲಕ್ಷದ ಸ್ಟಾಂಟ್ ಡ್ಯೂಟಿ ತುಂಬಿದ್ದಾರೆ. ಮುಂಬೈನಲ್ಲಿ ಕೊಹ್ಲಿಗೆ ಮನೆಯಿಲ್ಲವೆಂದೇನಲ್ಲ. 2016ರಲ್ಲಿ ಕೊಹ್ಲಿ ವರ್ಲಿಯಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಅದ್ರ ಬೆಲೆ 36 ಕೋಟಿ ರೂಪಾಯಿ. ಸಮಯಕ್ಕೆ ಸರಿಯಾಗಿ ಮನೆ ಕೆಲಸ ಪೂರ್ಣಗೊಳ್ಳದ ಕಾರಣ ಕೊಹ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಕೊಹ್ಲಿ ವರ್ಲಿಯ ರಹೆಜಾ ಲೆಜೆಂಡ್ ಕಟ್ಟಡದ 40ನೇ ಅಂತಸ್ತಿನಲ್ಲಿ ವಾಸವಾಗಿದ್ದಾರೆ. 24 ತಿಂಗಳಿಗಾಗಿ ಕೊಹ್ಲಿ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಕೊಹ್ಲಿ ಮುಂಬೈ ಮನೆ 2019ಕ್ಕೆ ವಾಸಕ್ಕೆ ಯೋಗ್ಯವಾಗಲಿದೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...