alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲಿನ ನಂತ್ರ ಬೆನ್ನು ನೋವಿನ ಬಗ್ಗೆ ಮಾತನಾಡಿದ ಕೊಹ್ಲಿ

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲೂ ಸೋಲುಂಡಿದೆ. ಮೊದಲ ಪಂದ್ಯದಲ್ಲಿ 31 ರನ್ ಗಳಿಂದ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 159 ರನ್ ಗಳಿಂದ ಹೀನಾಯವಾಗಿ ಸೋಲುಂಡಿದೆ. ಪಂದ್ಯದ ನಂತ್ರ ಮಾತನಾಡಿದ ಟೀಂ ಇಂಡಿಯಾ ನಾಯಕ ಕೊಹ್ಲಿ, ಇಂಗ್ಲೆಂಡ್ ಆಟಗಾರರನ್ನು ಹೊಗಳಿದ್ದಾರೆ. ಜೊತೆಗೆ ಬ್ಯಾಟಿಂಗ್ ವೈಫಲ್ಯ ಪಂದ್ಯ ಸೋಲಲು ಕಾರಣ ಎಂದಿದ್ದಾರೆ.

ಈ ಮಧ್ಯೆ ಕೊಹ್ಲಿ ತಮ್ಮ ಗಾಯದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಕೊಹ್ಲಿ, ಎರಡನೇ ಪಂದ್ಯವನ್ನು ನೋವಿನ ಮಧ್ಯೆಯೇ ಆಡಿದ್ದಾರೆ. ಮುಂದಿನ ಟೆಸ್ಟ್ ಪಂದ್ಯ ಆಗಸ್ಟ್ 18ರಿಂದ ಶುರುವಾಗಲಿದ್ದು, ಅಷ್ಟರಲ್ಲಿ ಗುಣಮುಖನಾಗಲಿದ್ದೇನೆಂದು ಕೊಹ್ಲಿ ಭರವಸೆ ನೀಡಿದ್ದಾರೆ. ಐದು ದಿನಗಳ ಸಮಯ ಸಿಗಲಿದೆ. ಸಂಪೂರ್ಣ ಫಿಟ್ ಆಗಿ ಮೂರನೇ ಟೆಸ್ಟ್ ಪಂದ್ಯವಾಡ್ತೇನೆಂದು ಕೊಹ್ಲಿ ಹೇಳಿದ್ದಾರೆ.

ಎರಡನೇ ಟೆಸ್ಟ್ ನಲ್ಲಿ ಕೊಹ್ಲಿ 29 ಎಸೆತಗಳಲ್ಲಿ 17 ರನ್ ಗಳಿಸಲಷ್ಟೇ ಶಕ್ತರಾದ್ರು. ಬೆನ್ನಿನ ಕೆಳ ಭಾಗದಲ್ಲಿ ನೋವಾಗಿದ್ದು, ಮತ್ತೆ ಮರುಕಳಿಸಿದೆ. ಅಧಿಕ ಒತ್ತಡ ಅದ್ರ ಮೇಲೆ ಬಿದ್ದಿದ್ದರಿಂದ ಹಾಗೂ ಹೆಚ್ಚು ಪಂದ್ಯವಾಡಿದ ಕಾರಣ ಹೀಗಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...