alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ, ಕೊಹ್ಲಿ ಒತ್ತಡ ದೂರ ಮಾಡ್ತಾರೆ ಈ ಸ್ನೇಹಿತರು…!

ಟೀಂ ಇಂಡಿಯಾದ ಸ್ಟಾರ್ ಆಟಗಾರರು ಇತ್ತೀಚಿನ ದಿನಗಳಲ್ಲಿ ತಮ್ಮ ವಿಶೇಷ ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆರಂಭಿಕ ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ ಸೇರಿದಂತೆ ಕೆಲ ಆಟಗಾರರು ಸ್ನೇಹಿತರ ಜೊತೆ ಕಾಲ ಕಳೆದು ರಿಲ್ಯಾಕ್ಸ್ ಆಗ್ತಿದ್ದಾರೆ.

ಕೊಹ್ಲಿ, ಧೋನಿ, ಶರ್ಮಾ ಒತ್ತಡ ಕಡಿಮೆ ಮಾಡ್ತಿರುವ ಸ್ನೇಹಿತರು ಮತ್ತ್ಯಾರೂ ಅಲ್ಲ. ಅವ್ರ ಸಾಕು ನಾಯಿಗಳು. ಧೋನಿ ಹಾಗೂ ಕೊಹ್ಲಿ ಇನ್ಸ್ಟ್ರಾಗ್ರಾಮ್ ನಲ್ಲಿ ಸಾಕು ನಾಯಿ ಜೊತೆಗಿರುವ ಪೋಟೋವನ್ನೂ ಹಾಕಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಸಮಯ ಕಳೆಯುತ್ತಿದ್ದಾರೆ. ಕೊಹ್ಲಿ, ಅನುಷ್ಕಾ ಜೊತೆ ನಾಯಿಯಿರುವ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿರುವ ಕೊಹ್ಲಿ, ನೋಡಿ ಸುಂದರ ಹುಡುಗ. ನಮ್ಮ ಜೊತೆ ಫೋಟೋ ಕ್ಲಿಕ್ಕಿಸುವಾಗ ತಾಳ್ಮೆಯಿಂದಿದ್ದ ಎಂದು ಶೀರ್ಷಿಕೆ ಹಾಕಿದ್ದಾರೆ.

ಇನ್ನು ರಾಂಚಿಯಲ್ಲಿರುವ ಧೋನಿ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ. ಐದು ನಾಯಿಗಳಿಗೆ ತರಬೇತಿ ನೀಡ್ತಾ ರಿಲ್ಯಾಕ್ಸ್ ಆಗ್ತಿದ್ದಾರೆ ಧೋನಿ. ಇನ್ನು ರೋಹಿತ್ ಶರ್ಮಾ ಕೂಡ ನಾಯಿ ಫೋಟೋವನ್ನು ಹಾಕಿ ಹ್ಯಾಪಿ ಬರ್ತ್ ಡೇ ಮೇನ್ ಮ್ಯಾನ್ ಎಂದು ಶೀರ್ಷಿಕೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...