alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಜೂಸ್ ಕ್ರಿಕೆಟಿಗ ಅಂದ್ರೆ ವಿರಾಟ್ ಕೊಹ್ಲಿ…!

MELBOURNE, AUSTRALIA - JANUARY 29: Virat Kohli of India gestures to Australian fans after India took the wicket of Glenn Maxwell of Australia during the International Twenty20 match between Australia and India at Melbourne Cricket Ground on January 29, 2016 in Melbourne, Australia. (Photo by Darrian Traynor - CA/Cricket Australia/Getty Images)ಸದ್ಯ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲೊಬ್ರು. ಅಷ್ಟು ದುಡ್ಡಿದ್ರೂ ಕೊಹ್ಲಿ ಮಾತ್ರ ಸಿಕ್ಕಾಪಟ್ಟೆ ಕಂಜೂಸ್ ಅಂತೆ. ಈ ಮಾತನ್ನ ನಾವ್ ಹೇಳ್ತಿಲ್ಲ, ಖುದ್ದು ಕ್ರಿಕೆಟಿಗ ಯುವರಾಜ್ ಸಿಂಗ್ ಬಾಯ್ಬಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ದೊಡ್ಡ ಜಿಪುಣ, ಊಟಕ್ಕೆ ಅಂತಾ ಹೊರಕ್ಕೆ ಹೋದಾಗಲೆಲ್ಲ ಬಿಲ್ ಕೊಡ್ತಾ ಇದ್ದಿದ್ದು ನಾನೇ, ಒಮ್ಮೊಮ್ಮೆ ಬಿಲ್ ಕೊಡುವಂತೆ ಕೊಹ್ಲಿಗೆ ಒತ್ತಾಯ ಮಾಡಬೇಕಾಗುತ್ತಿತ್ತು ಎಂದಿದ್ದಾರೆ ಯುವರಾಜ್.

ಆಶಿಶ್ ನೆಹ್ರಾ ಕೂಡ ಬಲು ಜಿಪುಣರಂತೆ. ತನಗೆ ಹೆಂಡತಿ, ಮಕ್ಕಳಿದ್ದಾರೆ, ಬೇಕಾಬಿಟ್ಟಿ ಹಣ ಖರ್ಚು ಮಾಡಕ್ಕಾಗಲ್ಲ ಅಂತಾ ನೆಹ್ರಾ ಅಲವತ್ತುಕೊಳ್ತಾರಂತೆ. ಕೆಲವೊಂದು ಹಿರಿಯ ಆಟಗಾರರು ಕೂಡ ಸಿಕ್ಕಾಪಟ್ಟೆ ಕಂಜೂಸ್, ಆದ್ರೆ ಅವರ ಹೆಸರು ಹೇಳೊಲ್ಲ ಎಂದಿದ್ದಾರೆ ಯುವರಾಜ್ ಸಿಂಗ್.

ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಇವರೆಲ್ಲಾ ಧಾರಾಳಿಗಳಾ ಅಂತ ಕೇಳಿದ್ದಕ್ಕೆ ಯುವಿ ಉತ್ತರಿಸಿಲ್ಲ. ಅದನ್ನು ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಂದುಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...