alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಕೇಳಿದ ಬಾಲಕನ ಜೊತೆಗೆ ಹೀಗೆ ನಡೆದುಕೊಂಡಿದ್ದಾರೆ ಕೊಹ್ಲಿ…!

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ, ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಟೆಸ್ಟ್ ಸರಣಿಯಲ್ಲಿ ಬೌನ್ಸ್ ಬ್ಯಾಕ್ ಮಾಡಿದೆ.

203 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಮುಂದಿನ ಟೆಸ್ಟ್ ಗೆ ಟೀಮ್ ಇಂಡಿಯಾ ಅಣಿಯಾಗುತ್ತಿದೆ. ನಾಟಿಂಗ್ ಹ್ಯಾಮ್ ಪಂದ್ಯದ ನಂತರ ಹೊಟೇಲ್ ಗೆ ತೆರಳೋಕೆ ಬಸ್ ಬಳಿಗೆ ಬಂದ ಟೀಮ್ ಇಂಡಿಯಾ ಆಟಗಾರರನ್ನು ಕ್ರಿಕೆಟ್ ಅಭಿಮಾನಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ರು.

ಈ ವೇಳೆ ನಡೆದ ಘಟನೆಯೊಂದು ವಿರಾಟ್, ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ತಾರೆ ಅನ್ನೋದನ್ನು ಜಗಜ್ಜಾಹೀರುಗೊಳಿಸಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಈಗ ಟ್ವಿಟ್ಟರ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಬಸ್ ಬಳಿ ಬಂದ ವಿರಾಟ್ ಕೊಹ್ಲಿಯನ್ನ ಅಭಿಮಾನಿಗಳು ಆಟೋಗ್ರಾಫ್ ಗೆ ಒತ್ತಾಯಿಸ್ತಾರೆ. ಇದರ ಮಧ್ಯೆ ಪುಟ್ಟ ಬಾಲಕನೊಬ್ಬ ವಿರಾಟ್ ಪಿಕ್ಚರ್ ಪ್ಲೀಸ್ ಅಂತ ಒಂದೇ ಸಮನೆ ಕೂಗೋದಕ್ಕೆ ಶುರುಮಾಡ್ತಾನೆ. ಕೂಡಲೇ ಆ ಬಾಲಕನ ಬಳಿಗೆ ಬಂದ ವಿರಾಟ್ ಕೊಹ್ಲಿ ಆ ಬಾಲಕನಿಗೆ ಫೋಟೋಗ್ರಾಫ್ ಜೊತೆಗೆ ಆಟೋಗ್ರಾಫ್ ಕೂಡ ಕೊಡ್ತಾರೆ.

ಕೇವಲ ಆ ಬಾಲಕನಿಗೆ ಮಾತ್ರವಲ್ಲ. ಅಲ್ಲಿದ್ದ ಒಂದಷ್ಟು ಮಂದಿಗೆ ಕೂಡ ಕೊಹ್ಲಿ ಆಟೋಗ್ರಾಫ್ ಕೊಡ್ತಾರೆ. ಕೊಹ್ಲಿ ಬಾಲಕನಿಗೆ ಸ್ಪಂದಿಸಿದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೊಹ್ಲಿ ಪ್ರತಿಕ್ರಿಯೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...