alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ಮ್ಯೂಸಿಯಂನಲ್ಲಿ ರಾರಾಜಿಸಲಿದೆ ಕೊಹ್ಲಿ ಪ್ರತಿಮೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ದೆಹಲಿ ಮ್ಯಾಡಮ್ ಟ್ಯುಸ್ಸಾಡ್ಸ್ ಮ್ಯೂಸಿಯಂ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಶೀಘ್ರದಲ್ಲಿಯೇ ಕೊಹ್ಲಿ ಮೇಣದ ಪ್ರತಿಮೆ ಮ್ಯೂಸಿಯಂನಲ್ಲಿ ರಾರಾಜಿಸಲಿದೆ. ಈಗಾಗಲೇ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಲಿಯೋನೆಲ್ ಮೆಸ್ಸಿ ಪ್ರತಿಮೆಗಳು ಇಲ್ಲಿ ಸ್ಥಾನ ಪಡೆದಿವೆ.

12 ವರ್ಷಗಳ ಹಿಂದೆ ಪ್ರಥಮ ಶ್ರೇಣಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಅಂಡರ್ 19 ವಿಶ್ವಕಪ್ ಗೆಲುವಿಗೆ ಕಾರಣವಾಗಿ ಟೀಂ ಇಂಡಿಯಾ ನಾಯಕರಾದ ಕೊಹ್ಲಿ ದಾರಿ ಅದ್ಭುತವಾಗಿದೆ. ಅರ್ಜುನ ಪ್ರಶಸ್ತಿ, ಐಸಿಸಿ ವರ್ಷದ ಶ್ರೇಷ್ಠ ಕ್ರಿಕೆಟರ್, ಬಿಸಿಸಿಐನ ಸರ್ವಶ್ರೇಷ್ಠ ಅಂತರಾಷ್ಟ್ರೀಯ ಕ್ರಿಕೆಟರ್ ಸೇರಿದಂತೆ ಅನೇಕ ಪ್ರಶಸ್ತಿಗಳು ಕೊಹ್ಲಿಗೆ ಒಲಿದು ಬಂದಿವೆ. ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಕೊಹ್ಲಿ ಸಾಧನೆ ಪರಿಗಣಿಸಿ ಮ್ಯಾಡಮ್ ಟ್ಯುಸ್ಸಾಡ್ಸ್ ಮ್ಯೂಸಿಯಂ ತಂಡ ಕೊಹ್ಲಿಯವರನ್ನು ಭೇಟಿ ಮಾಡಿದೆ. ಲಂಡನ್ ನ ಪ್ರಸಿದ್ಧ ಕಲಾವಿದರ ತಂಡ ಬಂದು ಕೊಹ್ಲಿ ಅಳತೆ ತೆಗೆದುಕೊಂಡಿದೆ. ಇದೊಂದು ಹೆಮ್ಮೆ ವಿಚಾರ. ನಾನು ಮ್ಯಾಡಮ್ ಟ್ಯುಸ್ಸಾಡ್ಸ್ ಗೆ ಧನ್ಯವಾದ ಹೇಳುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...