alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ಬಂದ ವಿರಾಟ್ ಕೊಹ್ಲಿ ಕೊನೆಗೆ ಹೇಳಿದ್ದೇನು ಗೊತ್ತಾ…?

ಗುರುವಾರದಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ನಾಳೆ ಮಧ್ಯಾಹ್ನ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂನಲ್ಲಿ ಲೈವ್ ನಲ್ಲಿ ಬರುತ್ತಿದ್ದೇನೆ. ನೀವು ಜೊತೆಯಾಗಿ, ನಿಮ್ಮೊಂದಿಗೆ ಮುಖ್ಯವಾದ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ. ಯಾರೂ ಮರೆಯದೇ ಜೊತೆಯಾಗಿ ಎಂದು ಹೇಳಿದ್ದರು.

ಪ್ರಸಕ್ತ ಐಪಿಎಲ್ ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಪ್ರದರ್ಶನ ನೀಡಿದ್ದು, ಈ ಹಿನ್ನಲೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೊಹ್ಲಿ ಪ್ರಕಟಿಸಲಿದ್ದಾರೆಂದೇ ಅಭಿಮಾನಿಗಳು ಭಾವಿಸಿದ್ದರು. ಮತ್ತೆ ಕೆಲವರು ಐಪಿಎಲ್ ನಲ್ಲಿ ಆರ್ ಸಿ ಬಿ ಯ ಕಳಪೆ ಪ್ರದರ್ಶನದ ಕುರಿತು ಅಭಿಮಾನಿಗಳ ಬಳಿ ಕೊಹ್ಲಿ ಕ್ಷಮೆ ಕೇಳಲಿದ್ದಾರೆಂದು ಭಾವಿಸಿದ್ದರು.

ಹೇಳಿದಂತೆ ವಿರಾಟ್ ಕೊಹ್ಲಿ ಇಂದು ಲೈವ್ ಗೆ ಬಂದಿದ್ದಾರೆ. ಆದರೆ ಅದು ಕಮರ್ಷಿಯಲ್ ಕಾರಣಕ್ಕಾಗಿ. ಪ್ರತಿಷ್ಟಿತ ಶೂ ಕಂಪನಿಯೊಂದರ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅದರ ಪ್ರಮೋಷನ್ ಮಾಡಿದ್ದು, ಇದು ಈಗ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಭಿಮಾನಿಗಳನ್ನು ಕೊಹ್ಲಿ ಈ ಮೂಲಕ ವಂಚಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಣ ಗಳಿಕೆಯನ್ನೇ ಕೊಹ್ಲಿ ತಮ್ಮ ಉದ್ದೇಶವಾಗಿರಿಸಿಕೊಂಡಿದ್ದು, ಇದಕ್ಕೆ ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡಿದ್ದಾರೆಂದು ಈಗ ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...