alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ಗೂ ಮುನ್ನ ವಿರಾಟ್-ಅನುಷ್ಕಾ ಶಾಪಿಂಗ್

ಬರ್ಮಿಂಗ್ಹ್ಯಾಮ್ ಅಂಗಳದಲ್ಲಿ ನಿನ್ನೆಯಿಂದ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಮೊದಲ ಟೆಸ್ಟ್ ಆಡಲು ಅಖಾಡಕ್ಕೆ ಇಳಿದಿದೆ. ಕೊಹ್ಲಿ ಸಹ ಮೊದಲ ಟೆಸ್ಟ್ ಗೆಲ್ಲುವ ವಿಶ್ವಾಸದಲಿದ್ದಾರೆ. ಆದ್ರೆ, ಟೆಸ್ಟ್ ಗೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಶಾಪಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.

ಟೀಮ್ ಇಂಡಿಯಾದ ನಾಯಕ ಕೊಹ್ಲಿ ಅಭ್ಯಾಸದ ಬಳಿಕ ಸಿಕ್ಕ ಕೊಂಚ ಟೈಮ್ ನಲ್ಲಿ ಮಡದಿಯೊಂದಿಗೆ ಶಾಪಿಂಗ್ ಮಾಡಿದ್ದಾರೆ. ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬರ್ಮಿಂಗ್ಹ್ಯಾಮ್ ಶಾಂಪಿಂಗ್ ಮಾಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಪಿಂಗ್ ಬಳಿಕ ಅನುಷ್ಕಾ ಶರ್ಮಾ ತವರಿಗೆ ವಾಪಸ್ಸಾಗಿದ್ದಾರೆ.

ವಿರಾಟ್-ಅನುಷ್ಕಾ ಸಾಮಾಜಿಕ ತಾಣದಲ್ಲಿ ಫೋಟೋ ಅಪ್ ಲೋಡ್ ಮಾಡ್ತಾ ಇರ್ತಾರೆ. ಈ ಇಬ್ಬರು ಸ್ಟಾರ್ ಗಳಿಗೆ ಅಸಂಖ್ಯಾತ ಫ್ಯಾನ್ ಫಾಲೋವರ್ಸ್ ಗಳಿದ್ದು, ಫೋಟೋ ಲೈಕ್ ಮಾಡ್ತಾರೆ. ಇನ್ನು ಕ್ಯೂಟ್ ಕಪಲ್ ಕಲರ್ಫುಲ್ ಚಿತ್ರಗಳು ವೈರಲ್ ಆಗಿವೆ. ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಪಂದ್ಯವನ್ನು ಆಡಿದಾಗ ಅನುಷ್ಕಾ ಸಹ ವಿರಾಟ್ ಜೊತೆಗೆ ಇದ್ದರು.

ಬಿಸಿಸಿಐ ಇತ್ತೀಚಿನ ನಿಯಮದ ಅನ್ವಯ ಟೆಸ್ಟ್ ಪಂದ್ಯಗಳನ್ನು ಆಡುವಾಗ, ಪತ್ನಿ ಹಾಗೂ ಪ್ರೇಯಸಿಯರು ಆಟಗಾರರ ಜೊತೆಗೆ ತಂಗುವಂತಿಲ್ಲ ಎಂದು ತಿಳಿಸಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಪ್ರದರ್ಶನದ ಆಧಾರದ ಮೇಲೆ, ಮುಂದಿನ ತೀರ್ಮಾನವನ್ನು ಬಿಸಿಸಿಐ ಕೈಗೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...