alex Certify
ಕನ್ನಡ ದುನಿಯಾ       Mobile App
       

Kannada Duniya

ಆಸೀಸ್ ಮಾಧ್ಯಮ ವಿರುದ್ದ ಕೊಹ್ಲಿ ಅಭಿಮಾನಿಗಳ ಕೆಂಗಣ್ಣು

trum-kol

ನವದೆಹಲಿ: ಬೆಂಗಳೂರಿನಲ್ಲಿ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾದ ಸ್ಮಿತ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ಜಟಾಪಟಿ ನಡೆದಿತ್ತು.

ಈ ವಿವಾದ ತಣ್ಣಗಾಗುವ ಸಂದರ್ಭದಲ್ಲಿ ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿ ಆಸೀಸ್ ಮಾಧ್ಯಮದಲ್ಲಿ ಟೀಕಿಸಿದ್ದು, ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಈಗ ಆಸೀಸ್ ಪ್ರಮುಖ ಪತ್ರಿಕೆ ‘ದಿ ಡೈಲಿ ಟೆಲಿಗ್ರಾಫ್’ ನಲ್ಲಿ ಕೊಹ್ಲಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಲಾಗಿದೆ.

ಕೊಹ್ಲಿ ಕ್ರೀಡಾ ಜಗತ್ತಿನ ಡೊನಾಲ್ಡ್ ಟ್ರಂಪ್ ಎಂದು ಪತ್ರಿಕೆ ಹಾಸ್ಯ ಮಾಡಿದೆ. ಕೊಹ್ಲಿ ಸುಳ್ಳು ಸುದ್ದಿ ಹಬ್ಬಿಸಿ, ತಮಗಾಗಿ ಕಾನೂನು ರಚಿಸಿಕೊಂಡವರಂತೆ ವರ್ತಿಸುತ್ತಾರೆ ಎಂದು ಟೀಕಿಸಿದೆ. ಈ ಮೂಲಕ ಕೊಹ್ಲಿ ವಿರೋಧಿ ಅಭಿಯಾನ ಮುಂದುವರೆಸಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...