alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ಪ್ಲಾನ್ ಬಗ್ಗೆ ಮಾಹಿತಿ ನೀಡಿದ ಕೊಹ್ಲಿ

ಇಂದೋರ್ ನ ಹೋಳ್ಕರ್ ಮೈದಾನದಲ್ಲಿ ಇಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.

11 ಪಂದ್ಯಗಳನ್ನಾಡಿರುವ ಆರ್.ಸಿ.ಬಿ. 7 ಪಂದ್ಯಗಳನ್ನು ಸೋತು, 4 ಪಂದ್ಯಗಳಲ್ಲಿ ಗೆದ್ದು ಕೇವಲ 8 ಅಂಕ ಪಡೆದಿದೆ. ಪಂಜಾಬ್ ತಂಡ 11 ಪಂದ್ಯಗಳನ್ನಾಡಿದ್ದು, 6 ಪಂದ್ಯ ಜಯಿಸಿದೆ. ಕಳೆದ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಪಂಜಾಬ್ ಇಂದಿನ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಸೋಲುಗಳಿಂದ ಕಂಗೆಟ್ಟಿದ್ದ ಆರ್.ಸಿ.ಬಿ., ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಜಯಗಳಿಸಿದ ಬಳಿಕ ಕೊನೆ ಆಸೆ ಉಳಿದಿದೆ. ನಾಕೌಟ್ ಹಾದಿಯಲ್ಲಿ ಉಳಿಯಲು ಇಂದಿನ ಪಂದ್ಯವನ್ನು ಕೂಡ ಗೆಲ್ಲಬೇಕಿದೆ. ನಾಕೌಟ್ ಆಸೆ ಭಗ್ನವಾಗಿದ್ದರೂ ಆರ್.ಸಿ.ಬಿ. ಮುಂದಿನ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ, ಉಳಿದ ತಂಡಗಳ ಫಲಿತಾಂಶ ಆಧರಿಸಿ ಪ್ಲೇ ಆಫ್ ಹಂತಕ್ಕೆ ಏರುವ ಸಾಧ್ಯತೆ ಇದೆ. ಆದರೆ, ಅದಕ್ಕಾಗಿ ಉಳಿದ 3 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಬೇಕು. ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ.

ಇದೇ ವೇಳೆ ಆರ್.ಸಿ.ಬಿ. ನಾಯಕ ವಿರಾಟ್ ಕೊಹ್ಲಿ, ಮುಂದಿನ ಪ್ಲಾನ್ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ಪಂದ್ಯಗಳಲ್ಲಿ ಗುರಿ ಬೆನ್ನತ್ತಲು ಬಯಸುವುದಾಗಿ ಹೇಳಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 182 ರನ್ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ. 19 ಓವರ್ ಗಳಲ್ಲಿ ಗೆದ್ದಿತ್ತು. ಗುರಿ ಬೆನ್ನತ್ತುವಾಗ ಬ್ಯಾಟ್ಸ್ ಮನ್ ಗಳು ಜವಾಬ್ದಾರಿ ಅರಿತು ಆಡಬಹುದಾಗಿದೆ. ಎಲ್ಲಾ ಪಂದ್ಯಗಳನ್ನು ನಾವು ಜಯಿಸಬೇಕಿದೆ. ಇದಕ್ಕಾಗಿ ಗುರಿ ಬೆನ್ನತ್ತುವುದು ಸೂಕ್ತ ಎಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...