alex Certify
ಕನ್ನಡ ದುನಿಯಾ       Mobile App
       

Kannada Duniya

ಏನ್ ಹೇಳ್ತಾರೆ ಕೊಹ್ಲಿ? ಭಾರೀ ಕುತೂಹಲ ಮೂಡಿಸಿದೆ ಟ್ವೀಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಳೆ ಮಧ್ಯಾಹ್ನ 1.30 ಕ್ಕೆ ವಿಶೇಷ ಪ್ರಕಟಣೆ ನೀಡುವುದಾಗಿ ಹೇಳಿದ್ದು, ಭಾರೀ ಕುತೂಹಲ ಮೂಡಿಸಿದೆ.

ಟ್ವಿಟರ್ ನಲ್ಲಿ ಪ್ರಕಟಣೆ ನೀಡಿರುವ ಕೊಹ್ಲಿ, ನಾಳೆ ಮಧ್ಯಾಹ್ನ 1.30 ಕ್ಕೆ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂನಲ್ಲಿ ಲೈವ್ ನಲ್ಲಿ ಬರುತ್ತಿದ್ದೇನೆ. ನೀವು ಜೊತೆಯಾಗಿ, ನಿಮ್ಮೊಂದಿಗೆ ಮುಖ್ಯವಾದ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ. ಯಾರೂ ಮರೆಯದೇ ಜೊತೆಯಾಗಿ ಎಂದು ತಿಳಿಸಿದ್ದಾರೆ.

ಐ.ಪಿ.ಎಲ್.ನಲ್ಲಿ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷಿತ ಪ್ರದರ್ಶನ ನೀಡದೇ ನಿರಾಸೆ ಮೂಡಿಸಿದೆ. ಈ ಕಾರಣದಿಂದ ಕೊಹ್ಲಿ ಆರ್.ಸಿ.ಬಿ. ನಾಯಕತ್ವವನ್ನು ತೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳೆ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂನಲ್ಲಿ ಲೈವ್ ನಲ್ಲಿ ಅವರು ಮುಖ್ಯವಾದ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಅದೇನೆಂಬುದನ್ನು ತಿಳಿಯಲು ನಾಳೆ ಮಧ್ಯಾಹ್ನದವರೆಗೂ ಕಾಯಬೇಕಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...