alex Certify
ಕನ್ನಡ ದುನಿಯಾ       Mobile App
       

Kannada Duniya

ಉಸೇನ್ ಬೋಲ್ಟ್ ಗೆ ಕೊಹ್ಲಿ ಕೊಟ್ಟಿದ್ದಾರೆ ವಿಶೇಷ ಆಹ್ವಾನ

usain-bolt-pose

ಉಸೇನ್ ಬೋಲ್ಟ್ ಜಗತ್ತು ಕಂಡ ಅತಿಶ್ರೇಷ್ಠ ಅಥ್ಲೀಟ್. ಒಲಿಂಪಿಕ್ಸ್ ನಲ್ಲಿ ಹತ್ತಾರು ಸ್ವರ್ಣ ಪದಕ ಗೆದ್ದಿರುವ ಬೋಲ್ಟ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸದ್ಯದಲ್ಲೇ ಬೋಲ್ಟ್ ನಿವೃತ್ತಿ ಹೊಂದಲಿದ್ದಾರೆ ಅನ್ನೋ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಉಸೇನ್ ಬೋಲ್ಟ್ ರ ಬಿಗ್ ಫ್ಯಾನ್. ಬೋಲ್ಟ್ ವಿದಾಯ ಹೇಳಿದ್ರೆ, ಅವರನ್ನು ಮಿಸ್ ಮಾಡಿಕೊಳ್ತೇವೆ ಅಂತಾ ಕೊಹ್ಲಿ ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರೋ ಕೊಹ್ಲಿ, ಬೋಲ್ಟ್ ಗೆ ಶುಭ ಹಾರೈಸಿದ್ದಾರೆ.

ಅಷ್ಟೇ ಅಲ್ಲ ಕ್ರಿಕೆಟ್ ಆಡುವಂತೆ ಆಹ್ವಾನವನ್ನೂ ಕೊಟ್ಟಿದ್ದಾರೆ. ಕ್ರಿಕೆಟ್ ಆಡಬೇಕು ಎನಿಸಿದ್ರೆ ತನ್ನನ್ನು ಕಾಂಟಾಕ್ಟ್ ಮಾಡಿ ಅಂತಾ ಹೇಳಿದ್ದಾರೆ. ಕೊಹ್ಲಿ ಮೆಸೇಜ್ ಗೆ ಬೋಲ್ಟ್ ಕೂಡ ಪ್ರತಿಕ್ರಿಯಿಸಿದ್ದಾರೆ, ಧನ್ಯವಾದ ಅರ್ಪಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...