alex Certify
ಕನ್ನಡ ದುನಿಯಾ       Mobile App
       

Kannada Duniya

ದ.ಆಫ್ರಿಕಾ ನೆಲದಲ್ಲಿ ಮತ್ತೊಂದು ಇತಿಹಾಸ ಬರೆದ ಕೊಹ್ಲಿ ಟೀಂ

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಮತ್ತೊಂದು ಇತಿಹಾಸ ಬರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟ್ವೆಂಟಿ-20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಕೊಹ್ಲಿ ಪಡೆ ದಾಖಲೆ ನಿರ್ಮಾಣ ಮಾಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ವಿರಾಟ್ ಬ್ರಿಗೇಡ್ ಇತಿಹಾಸ ನಿರ್ಮಿಸಿತ್ತು. ಈವರೆಗೆ ಟೀಂ ಇಂಡಿಯಾದ ಯಾವ ನಾಯಕರೂ ಮಾಡದ ಸಾಧನೆಯನ್ನು ಕೊಹ್ಲಿ ಮಾಡಿದ್ದರು. 26 ವರ್ಷಗಳ ನಂತ್ರ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯವನ್ನು ತನ್ನ ಕೈವಶ ಮಾಡಿಕೊಂಡಿತ್ತು .

ಈಗ 20-20 ಪಂದ್ಯವನ್ನು ಕೈವಶ ಮಾಡಿಕೊಂಡಿರುವ ಕೊಹ್ಲಿ ಬಳಗ ಈವರೆಗೆ ಅಸಾಧ್ಯವಾದದ್ದನ್ನು ಸಾಧ್ಯಮಾಡಿ ತೋರಿಸಿದೆ. ಕೊಹ್ಲಿ ತಂಡದಿಂದ ಹೊರಗಿದ್ದರೂ ಐದನೇ ಟಿ-20 ಪಂದ್ಯವನ್ನು ವಶಕ್ಕೆ ಪಡೆದ ಭಾರತ 2-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತು. ಈ ಮೂಲಕ ದಾಖಲೆ ಬರೆದಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಪ್ರವಾಸ

ಮೂರು ಪಂದ್ಯಗಳ ಟೆಸ್ಟ್ ಸರಣಿ –ದಕ್ಷಿಣ ಆಫ್ರಿಕಾ 2-1 ಜಯ

ಆರು ಪಂದ್ಯಗಳ ಏಕದಿನ ಸರಣಿ –ಭಾರತ 5-1 ಜಯ

ಮೂರು ಪಂದ್ಯಗಳ ಟಿ-20 ಸರಣಿ – ಭಾರತ 2-1 ಜಯ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...