alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪಡೆಗೆ ಭ್ರಮನಿರಸನ, ದ. ಆಫ್ರಿಕಾಕ್ಕೆ ಅದೃಷ್ಟ ತಂದ ಪಿಂಕ್ ಜೆರ್ಸಿ

ಜೋಹಾನ್ಸ್ ಬರ್ಗ್: 6 ಪಂದ್ಯಗಳ ಏಕದಿನ ಸರಣಿಯಲ್ಲಿ 3 ಪಂದ್ಯಗಳನ್ನು ಜಯಿಸಿ, ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಭ್ರಮನಿರಸನವಾಗಿದೆ. ದಕ್ಷಿಣ ಆಫ್ರಿಕಾ 4 ನೇ ಏಕದಿನ ಪಂದ್ಯದಲ್ಲಿ ರೋಚಕ ಗೆಲುವು ಕಂಡಿದೆ.

ಮಳೆಯಿಂದಾಗಿ ಸ್ಥಗಿತವಾಗಿದ್ದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮವನ್ನು ಅನುಸರಿಸಲಾಗಿದ್ದು, ದಕ್ಷಿಣ ಆಫ್ರಿಕಾ 5 ವಿಕೆಟ್ ಅಂತರದಿಂದ ಜಯಗಳಿಸಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲಿ ಗೆಲುವಿನ ಲಯದಲ್ಲಿತ್ತು. ನಂತರದಲ್ಲಿ ಪಂದ್ಯ ಕೈಚೆಲ್ಲಿ ನಿರಾಸೆ ಅನುಭವಿಸಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಹರಿಣಗಳು ಕೊಹ್ಲಿ ಪಡೆಯನ್ನು ಮಣಿಸಿವೆ.

ಭಾರತದ ಪರ ರೋಹಿತ್ ಶರ್ಮಾ 5, ಶಿಖರ್ ಧವನ್ 109, ವಿರಾಟ್ ಕೊಹ್ಲಿ 75, ಅಜಿಂಕ್ಯಾ ರೆಹಾನೆ 8, ಶ್ರೇಯಸ್ ಅಯ್ಯರ್ 18, ಎಂ.ಎಸ್. ಧೋನಿ ಅಜೇಯ 42, ಹಾರ್ದಿಕ್ ಪಾಂಡ್ಯ 9, ಭುವನೇಶ್ವರ್ ಕುಮಾರ್ 5, ಕುಲದೀಪ್ ಯಾದವ್ ಅಜೇಯ 0 ರನ್ ಗಳಿಸಿದ್ದಾರೆ.

ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ ಮಾರ್ಕೆಲ್ 1, ಕಗಿಸೊ ರಬಾಡ 2, ಲುಂಗಿ ಎನ್ ಗಿಡಿ 2, ಕ್ರಿಸ್ ಮೊರಿಸ್ 1 ವಿಕೆಟ್ ಪಡೆದರು.

290 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ನಡೆಸುವಾಗ ಮಳೆ ಬಂದ ಕಾರಣ ಪಂದ್ಯವನ್ನು 28 ಓವರ್ ಗೆ ಸೀಮಿತಗೊಳಿಸಲಾಯಿತು. ಡಕ್ವರ್ಥ್ ಲೂಯಿಸ್ ನಿಯಮ ಅಳವಡಿಸಿ, 28 ಓವರ್ ಗಳಲ್ಲಿ 202 ರನ್ ಗೆಲುವಿನ ಗುರಿ ಪಡೆದ ದಕ್ಷಿಣ ಆಫ್ರಿಕಾ 25.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಗೆಲುವು ಕಂಡಿದೆ.

ಏಡನ್ ಮರ್ಕ್ರಮ್ 22, ಹಾಶಿಮ್ ಆಮ್ಲ 33, ಜೆ.ಪಿ. ಡುಮಿನಿ 10, ಎ.ಬಿ. ಡಿ’ವಿಲಿಯರ್ಸ್ 26, ಡೇವಿಡ್ ಮಿಲ್ಲರ್ 39, ಹೆನ್ರಿಚ್ ಕ್ಲಾಸೆನ್ ಅಜೇಯ 43, ಆಂಡಿಲೆ ಫೆಲ್ಕುವಾಯೊ ಅಜೇಯ 23 ರನ್ ಗಳಿಸಿದ್ದಾರೆ.

ಭಾರತದ ಪರ ಕುಲದೀಪ್ ಯಾದವ್ 2, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ ತಲಾ 1 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ತಂಡಕ್ಕೆ ಪಿಂಕ್ ಜೆರ್ಸಿ ಅದೃಷ್ಟ ತಂದಿದೆ. ಕ್ಯಾನ್ಸರ್ ಜಾಗೃತಿಗಾಗಿ ದಕ್ಷಿಣ ಆಫ್ರಿಕಾ ತಂಡ ಪ್ರತಿ ವರ್ಷ 1 ಏಕದಿನ ಪಂದ್ಯದಲ್ಲಿ ಪಿಂಕ್ ಜೆರ್ಸಿಯನ್ನು ತೊಟ್ಟು ಆಟವಾಡಲಿದೆ. ಹೀಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಜಯಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...