alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ದೇಶ ಭಕ್ತಿ ನೋಡಿ ಭಾವುಕರಾದ್ರು ಕೊಹ್ಲಿ

ಭಾರತ, ಇಂಗ್ಲೆಂಡ್ ವಿರುದ್ಧ ಮೂರನೇ ಹಾಗೂ ಕೊನೆ ಏಕದಿನ ಪಂದ್ಯವನ್ನು ಇಂದು ಆಡಲಿದೆ. ಇಂದು ಪಂದ್ಯಗೆದ್ದವರ ಪಾಲಾಗಲಿದೆ ಸರಣಿ. ನಿರ್ಣಾಯಕ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟರ್ ಅಭಿಮಾನಿಗಳ ಗಮನ ಸೆಳೆದಿದೆ.

ಪಂದ್ಯಕ್ಕೂ ಮುನ್ನ ದೇಶಭಕ್ತಿಯ ವಿಡಿಯೋ ಒಂದನ್ನು ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಹಾಕಿದ್ದಾರೆ ವಿರಾಟ್ ಕೊಹ್ಲಿ. ವಿಡಿಯೋದಲ್ಲಿ ರಾಷ್ಟ್ರಗೀತೆ ಹಾಡಲಾಗ್ತಿದೆ. ಮೈದಾನದಲ್ಲಿದ್ದ ಜನರೆಲ್ಲ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ನೀಡ್ತಿದ್ದಾರೆ. ಈ ವಿಡಿಯೋಕ್ಕೆ ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ವಿಡಿಯೋ ಜೊತೆ ಭಾವುಕ ಸಂದೇಶವೊಂದನ್ನು ಕೊಹ್ಲಿ ಟ್ವಿಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿ ಮನಸ್ಸು ಖುಷಿಗೊಂಡಿದೆ. ಯಾವುದೇ ಷರತ್ತಿಲ್ಲದೆ ನಿರಂತರ ನಮಗೆ ಬೆಂಬಲ ನೀಡ್ತಿರುವ ನಿಮಗೆ ಧನ್ಯವಾದ. ನಿಮ್ಮ ಈ ಪ್ರೀತಿ ಇನ್ನಷ್ಟು ಕಷ್ಟಪಡಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಸೋಲುಂಡಿದೆ. ಕೊನೆಯ ಹಾಗೂ ಮೂರನೇ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದ್ದು, ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...