alex Certify
ಕನ್ನಡ ದುನಿಯಾ       Mobile App
       

Kannada Duniya

34 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಒಪ್ಪಂದ ರದ್ದು ಮಾಡಿದ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬೈನ ವರ್ಲಿಯಲ್ಲಿ ಖರೀದಿ ಮಾಡಿದ್ದ ಅಪಾರ್ಟ್ಮೆಂಟ್ ಒಪ್ಪಂದವನ್ನು ರದ್ದು ಮಾಡಿದ್ದಾರೆ. ವಿರಾಟ್ ಕೊಹ್ಲಿ ಮನೆಯನ್ನು ತಮ್ಮಿಷ್ಟದಂತೆ ಸಿದ್ಧಪಡಿಸುತ್ತಿದ್ರು. ಆದ್ರೀಗ ಅವರು ಅಪಾರ್ಟ್ಮೆಂಟ್ ಒಪ್ಪಂದವನ್ನು ರದ್ದು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

2016ರಲ್ಲಿ ಕೊಹ್ಲಿ ರಿಯಲ್ ಎಸ್ಟೇಟ್ ಕಂಪನಿ ಓಂಕಾರ್ ರಿಯಾಲ್ಟರ್ಸ್ & ಡೆವಲಪರ್ ಕಂಪನಿ ಮೂಲಕ 34 ಕೋಟಿ ಮೌಲ್ಯದ ಮನೆಯನ್ನು ಖರೀದಿ ಮಾಡಿದ್ದರು. 35ನೇ ಅಂತಸ್ತಿನಲ್ಲಿದ್ದ ಮನೆಗೆ ಐಷಾರಾಮಿ ವ್ಯವಸ್ಥೆಗಳನ್ನು ಕಲ್ಪಿಸಲಾಗ್ತಾಯಿತ್ತು. ಈಗ ಕೊಹ್ಲಿ ಮನಸ್ಸು ಬದಲಿಸಿದ್ದಾರೆ. ಮನೆ ಖರೀದಿ ಮಾಡದಿರಲು ನಿರ್ಧರಿಸಿದ್ದಾರೆ. ಮನೆ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ.

ಮಾರ್ಚ್ 20ರಂದು ಅಪಾರ್ಟ್ಮೆಂಟ್ ಒಪ್ಪಂದವನ್ನು ಕೊಹ್ಲಿ ರದ್ದುಗೊಳಿಸಿದ್ದಾರೆ ಎನ್ನಲಾಗ್ತಿದೆ. ಕೊಹ್ಲಿ ಪೆಂಟ್ ಹೌಸ್ ಖರೀದಿ ನಿರ್ಧಾರ ತೆಗೆದುಕೊಂಡಿದ್ದು ಬಾಂದ್ರಾ ಮತ್ತು ವರ್ಸೊವಾ ನಡುವೆ ಮನೆ ಹುಡುಕಾಟ ಶುರು ಮಾಡಿದ್ದಾರೆ. ಸದ್ಯ ವರ್ಲಿಯ ಅಪಾರ್ಟ್ಮೆಂಟ್ ಒಂದರ 40ನೇ ಮಹಡಿಯ ಮನೆಯೊಂದನ್ನು ಕೊಹ್ಲಿ ಬಾಡಿಗೆಗೆ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...