alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿ ಬಗ್ಗೆ ‘ದಾದಾ’ ಹೇಳಿದ್ದೇನು..?

kohli ganguly

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹಿಂದಿನ ಎರಡೂ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಯಶಸ್ವಿಯಾಗಿರುವ ಅವರು 3ನೇ ಸರಣಿಗಾಗಿ ವಿಂಡೀಸ್ ಪ್ರವಾಸದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ನ ಆಂಟಿಗುವಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ, ಭಾರತ ಅಮೋಘ ಪ್ರದರ್ಶನ ನೀಡಿದೆ. ನಾಯಕನ ಸ್ಥಾನಕ್ಕೆ ತಕ್ಕಂತೆ ಆಟವಾಡಿದ ವಿರಾಟ್ ಕೊಹ್ಲಿ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಲ್ಲದೇ, ದ್ವಿಶತಕ ದಾಖಲಿಸಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನ ಶ್ರೇಷ್ಟ ಜಾಹೀರಾತು ಎಂದು ಹಾಡಿ ಹೊಗಳಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್ ನ ಬಹುದೊಡ್ಡ ರಾಯಭಾರಿಯಾಗಿದ್ದಾರೆ. ಅವರು ಕ್ರೀಸ್ ನಲ್ಲಿದ್ದರೆ, ಅಭಿಮಾನಿಗಳಿಗೆ ರಸದೌತಣ ಸಿಗುತ್ತದೆ. ಭಾರತ ಕ್ರಿಕೆಟ್ ನ ಭವಿಷ್ಯ ವಿರಾಟ್ ಕೊಹ್ಲಿ. ವಿಂಡೀಸ್ ನೆಲದಲ್ಲಿ ದ್ವಿಶತಕ ಗಳಿಸಿದ ಭಾರತದ ಮೊದಲ ನಾಯಕ ಅವರು ಎಂದೆಲ್ಲಾ ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...