alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯ ದುಬಾರಿ ವಾಲೆಟ್ ಮೇಲೆ ಎಲ್ಲರ ಕಣ್ಣು, ಬೆಲೆ ಎಷ್ಟು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಸೂಪರ್ ಸ್ಟಾರ್ ಮಾತ್ರವಲ್ಲ, ದೊಡ್ಡ ದೊಡ್ಡ ಬ್ರಾಂಡ್ ಗಳ ರಾಯಭಾರಿಯೂ ಹೌದು. ಕೊಹ್ಲಿ ಸಖತ್ ಸ್ಟೈಲಿಶ್ ವ್ಯಕ್ತಿ. ದೇಶದ ಅತ್ಯಂತ ಬೆಲೆಬಾಳೋ ಸೆಲೆಬ್ರಿಟಿ ಬ್ರಾಂಡ್ ಕೂಡ. ಅವರ ಬ್ರಾಂಡ್ ಮೌಲ್ಯ 144 ಮಿಲಿಯನ್ ಡಾಲರ್.

ಹಾಗಾಗಿ ಯುವಕರಂತೂ ಕೊಹ್ಲಿ ಸ್ಟೈಲ್ ಅನುಕರಿಸಲು ಪ್ರಯತ್ನಿಸ್ತಾರೆ. ಅವರ ಹೇರ್ ಸ್ಟೈಲ್, ಗಡ್ಡ, ಉಡುಪುಗಳನ್ನೆಲ್ಲ ಗಮನಿಸಿ ಅದೇ ರೀತಿಯ ಫ್ಯಾಷನ್ ಮಾಡ್ತಾರೆ. ಆದ್ರೆ ಕೊಹ್ಲಿ ತೊಡೋ ದುಬಾರಿ ಉಡುಪುಗಳನ್ನು ಜನಸಾಮಾನ್ಯರು ಖರೀದಿಸೋದು ಕನಸಿನ ಮಾತು.

ಇತ್ತೀಚೆಗಷ್ಟೆ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ. ಈ ವೇಳೆ ಕೊಹ್ಲಿ ಅತ್ಯಂತ ದುಬಾರಿ ವಾಲೆಟ್ ಒಂದನ್ನು ಕೈಯಲ್ಲಿ ಹಿಡಿದಿದ್ರು. ಒಂದು ಟ್ರಾಲಿ ಬ್ಯಾಗ್, ಒಂದು ಬ್ಯಾಕ್ ಪ್ಯಾಕ್ ಇದ್ರೂ ವಾಲೆಟ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ರು ಕೊಹ್ಲಿ. ಈ ವಾಲೆಟ್ ಬೆಲೆ ಅಂದಾಜು 81,144 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...