alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಸ್ಟ್ರಾಗ್ರಾಮ್ ನ 1 ಫೋಟೋಕ್ಕೆ ಕೊಹ್ಲಿ ಗಳಿಸೋದೆಷ್ಟು ಗೊತ್ತಾ?

ಇನ್ಸ್ಟ್ರಾಗ್ರಾಮ್ ಮಾರ್ಕೆಟಿಂಗ್ ಸೆಲ್ಯೂಶನ್ ಕಂಪನಿ ಹಾಪರ್ ಹುಕ್ 2018 ರಲ್ಲಿ ಇನ್ಸ್ಟ್ರಾಗ್ರಾಮ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಫೋಟೋ ಹಂಚಿಕೆ ಅಪ್ಲಿಕೇಷನ್ ಮೂಲಕ ಯಾರು ಎಷ್ಟು ಗಳಿಕೆ ಕಂಡಿದ್ದಾರೆಂಬುದನ್ನು ಇದ್ರಲ್ಲಿ ವಿವರಿಸಲಾಗಿದೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿದೆ.

ಇನ್ಸ್ಟ್ರಾಗ್ರಾಮ್ ನಲ್ಲಿ 2018 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡವರ ಪಟ್ಟಿಯಲ್ಲಿ ಕೊಹ್ಲಿ 17 ನೇ ಸ್ಥಾನದಲ್ಲಿದ್ದಾರೆ. ಇದ್ರ ಮಾಹಿತಿ ಪ್ರಕಾರ ಕೊಹ್ಲಿ ಒಂದು ಪೋಸ್ಟ್ ಗೆ 120000 ಡಾಲರ್ ಅಂದ್ರೆ ಸುಮಾರು 81 ಲಕ್ಷ 51 ಸಾವಿರ ರೂಪಾಯಿ ಗಳಿಸುತ್ತಾರೆ.

ಆಟಗಾರರ ವಿಚಾರಕ್ಕೆ ಬಂದ್ರೆ ಪಟ್ಟಿಯಲ್ಲಿ ಕೊಹ್ಲಿ 9 ನೇ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ನ ಸ್ಟ್ರೈಕರ್ ಕ್ರಿಸ್ಟಿಯಾನೋ ರೋನಾಲ್ಡೋ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸ್ಟ್ರೈಕರ್ ಕ್ರಿಸ್ಟಿಯಾನೋ ರೋನಾಲ್ಡೋ ಇನ್ಸ್ಟ್ರಾಗ್ರಾಮ್ ನ ಒಂದು ಪೋಸ್ಟ್ ಗೆ 750000 ಡಾಲರ್ ಗಳಿಸ್ತಾರೆ. ಅಂದ್ರೆ ಸುಮಾರು 5 ಕೋಟಿ 15 ಲಕ್ಷದ 75 ಸಾವಿರ ರೂಪಾಯಿ.

ಎರಡನೇ ಸ್ಥಾನದಲ್ಲಿ ಬ್ರೇಜಿಲ್ ನ ಫುಟ್ಬಾಲ್ ಆಟಗಾರ ನೇಮಾರ್ ಹೆಸರಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ನೇಮಾರ್ ಗಳಿಕೆ 4 ಕೋಟಿ 12 ಲಕ್ಷದ 52 ಸಾವಿರ ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...