alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಟೆಗೆ 280 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿದ ಕೊಹ್ಲಿ

kohli_4vq0vkh

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೈದಾನದಲ್ಲೊಂದೇ ಅಲ್ಲ ಇನ್ನೂ ಅನೇಕ ವಿಷಯಗಳಲ್ಲಿ ಕೊಹ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕಾರು ಚಲಾಯಿಸೋದ್ರಲ್ಲೂ ಕೊಹ್ಲಿ ಎಕ್ಸ್ ಪರ್ಟ್. ಪ್ರತಿ ಗಂಟೆಗೆ 280 ಕಿಲೋಮೀಟರ್ ವೇಗದಲ್ಲಿ ಕಾರು ಚಲಾಯಿಸಿದ್ದಾರೆ ಕೊಹ್ಲಿ.

ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್ ಗೆ ಹೋಗುವ ಮೊದಲು ವಿರಾಟ್ ಕೊಹ್ಲಿ ಇಂಟರ್ನ್ಯಾಷನಲ್ ಸರ್ಕ್ಯೂಟ್ ಟ್ರ್ಯಾಕ್ ತಲುಪಿದ್ದರು. ಭುಜದ ನೋವಿನಿಂದ ಚೇತರಿಸಿಕೊಂಡಿರುವ ಕೊಹ್ಲಿ ಆಡಿ ಆರ್ 8 ಸ್ಫೋರ್ಟ್ಸ್ ಕಾರನ್ನು 280 ಕಿಲೋಮೀಟರ್ ವೇಗದಲ್ಲಿ ಚಲಾಯಿಸಿದ್ರು. ಆದ್ರೆ ಇದು ಕೊಹ್ಲಿಗೆ ತೃಪ್ತಿ ನೀಡಲಿಲ್ಲ.

ಹಿಂದಿನ ಬಾರಿ ಅವರು 290 ಕಿ.ಮೀ/ಗಂಟೆಗೆ ಕಾರು ಚಲಾಯಿಸಿದ್ದರು. ಈ ಬಾರಿ ಕೊನೆಯಲ್ಲಿ ಸ್ವಲ್ಪ ಭಯಗೊಂಡಿದ್ದರು. ಕಾರು ಚಲಾಯಿಸಿದ ನಂತ್ರ ಮಾತನಾಡಿದ ಅವರು ವೃತ್ತಿಪರ ಚಾಲಕರಂತೆ ಕಾರ್ ಚಲಾಯಿಸಲು ಸಾಧ್ಯವಿಲ್ಲ ಎಂದ್ರು. ಈ ವೇಳೆ ಕ್ರಿಕೆಟ್ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...