alex Certify
ಕನ್ನಡ ದುನಿಯಾ       Mobile App
       

Kannada Duniya

ರನ್ ಮಷಿನ್ ಕೊಹ್ಲಿ ಫಿಟ್ನೆಸ್ ನ ಗುಟ್ಟೇನು ಗೊತ್ತಾ…?

34 ಏಕದಿನ ಶತಕಗಳೊಂದಿಗೆ ಈಗಾಗ್ಲೇ 55 ಸೆಂಚುರಿ ಸಿಡಿಸಿರೋ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿಜಕ್ಕೂ ರನ್ ಮಷಿನ್. ಅತಿ ಶೀಘ್ರದಲ್ಲೇ 100 ಶತಕ ಬಾರಿಸಿರೋ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಕೊಹ್ಲಿ ಮುರಿಯುತ್ತಾರೆ ಅನ್ನೋದು ಅಭಿಮಾನಿಗಳ ನಿರೀಕ್ಷೆ.

2008ರಲ್ಲಿ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ನಿರಂತರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಪ್ರದರ್ಶನಕ್ಕೆ ಪೂರಕವಾಗಿರುವುದು ಅವರ ಫಿಟ್ನೆಸ್. ಬಬ್ಲಿ ಬಬ್ಲಿಯಾಗಿದ್ದ ವಿರಾಟ್ ಈಗ ಕಟ್ಟುಮಸ್ತಾದ ದೇಹ ಬೆಳೆಸಿದ್ದಾರೆ.

ಇದಕ್ಕಾಗಿ ವ್ಯಾಯಾಮದ ಜೊತೆಗೆ ಡಯಟ್ ಕೂಡ ಮಾಡ್ತಾರೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಎಲ್ಲವೂ ಫಿಕ್ಸ್ ಆಗಿರುತ್ತದೆ. ಫ್ಯಾಟ್ ಕಡಿಮೆ ಇರೋ, ಹೆಚ್ಚು ಪ್ರೋಟೀನ್ ಇರುವ ಆಹಾರ ಸೇವಿಸ್ತಾರೆ ಕೊಹ್ಲಿ. ಬೆಳಗಿನ ತಿಂಡಿಗೆ ಕೊಹ್ಲಿ ಒಂದು ಆಮ್ಲೆಟ್ ತಿನ್ನುತ್ತಾರೆ.

ಅದರಲ್ಲಿ 3 ಎಗ್ ವೈಟ್ಸ್, ಒಂದು ಪೂರ್ತಿ ಮೊಟ್ಟೆ, ಪಾಲಕ್, ಪೆಪ್ಪರ್, ಚೀಸ್, ಗ್ರಿಲ್ಡ್ ಬೇಕನ್ ಅಥವಾ ಸ್ಮೋಕ್ಡ್ ಸಾಲ್ಮನ್ ಇರುತ್ತದೆ. ಜೊತೆಗೆ ಪಪ್ಪಾಯ ಅಥವಾ ಕಲ್ಲಂಗಡಿ ಹಣ್ಣು ಸೇವಿಸ್ತಾರೆ. ವಿಶೇಷ ಅಂದ್ರೆ ಕೊಹ್ಲಿ ಯಾವ ದೇಶಕ್ಕೆ ಹೋದ್ರೂ ಅಲ್ಲಿಗೆ ಬೆಣ್ಣೆ ಕೊಂಡೊಯ್ಯುತ್ತಾರಂತೆ.

ಗ್ಲುಟನ್ ಫ್ರೀ ಬ್ರೆಡ್ ಗೆ ಬೆಣ್ಣೆ ಸವರಿಕೊಂಡು ತಿನ್ನುತ್ತಾರೆ. ಅದರ ಜೊತೆಗೆ ನಿಂಬೆರಸ ಬೆರೆಸಿದ ಗ್ರೀನ್ ಟೀ ಕುಡಿಯುತ್ತಾರೆ. ತರಕಾರಿಗಳ ಜೊತೆಗೆ ರೆಡ್ ಮೀಟ್ ಕೂಡ ಹೆಚ್ಚಾಗಿ ತಿನ್ನುತ್ತಿದ್ದಾರಂತೆ. ಮಧ್ಯಾಹ್ನ ಊಟಕ್ಕೆ ಗ್ರಿಲ್ಡ್ ಚಿಕನ್, ಮ್ಯಾಶ್ಡ್ ಪೊಟ್ಯಾಟೋ ಹಾಗೂ ಸ್ಪಿನಾಚ್ ಜೊತೆಗೆ ತರಕಾರಿಗಳನ್ನು ಸೇವಿಸ್ತಾರೆ. ರಾತ್ರಿ ಊಟಕ್ಕೆ ಸೀ ಫುಡ್ ಕಡ್ಡಾಯ. ಇದೇ ಕೊಹ್ಲಿಯ ಫಿಟ್ನೆಸ್ ಗುಟ್ಟು.

Rest day is a cheat day, never stop working hard. 💪🏃

A post shared by Virat Kohli (@virat.kohli) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...